Friday, March 29, 2024
spot_img
More

    Latest Posts

    ಪೆರಾರ ಮಹಾ ಸಂಸ್ಥಾನದಲ್ಲಿ ತು.ರ.ವೇ ಮಹಿಳಾ ಘಟಕದ ವತಿಯಿಂದ ಭಜನಾ ಕಾರ್ಯಕ್ರಮ

    ದೇವರನ್ನು ಓಲೈಸಲು ಪೂಜೆ ಜೊತೆ ಭಜನೆಯ ಮೂಲಕವೂ ಸಾಧ್ಯ ಎಂಬುವುದನ್ನು ನಮ್ಮ ಹಿರಿಯರು ತೋರಿಸಿಕೊಟ್ಟಿದ್ದಾರೆ. ಭಜನೆಗೆ ತನ್ನದೇ ಆದ ವಿಶೇಷಯಿದೆ. ಭಜನೆ ಮಾಡುವುದರಿಂದ, ಕೇಳುವುದರಿಂದ ಮನಸ್ಸು ಸ್ಥಿರವಾಗಿ ಆನಂದ ಉಂಟುಮಾಡುತ್ತದೆ. ನಮ್ಮಲ್ಲಿ ಧನಾತ್ಮಕ ಶಕ್ತಿ ಅಭಿವೃದ್ಧಿ ಹೊಂದಿ, ಹೊಸ ಚೈತನ್ಯ ತುಂಬಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲು ಪ್ರೇರೇಪಿಸುತ್ತದೆ. ಬಜ್ಪೆ ಸಮೀಪದ ಪೆರಾರ ಬಲವಂಡಿ ದೈವಸ್ಥಾನ ಕ್ಷೇತ್ರ ಒಂದು ಪ್ರಸಿದ್ಧ ಯಾತ್ರಾ ಸ್ಥಳ. ಸುಂದರ ಹಸಿರು ಪರಿಸರದ ನಡುವೆ ಇರುವ ಈ ಕ್ಷೇತ್ರ ಕೆಲ ವರ್ಷಗಳ ಹಿಂದೆ ನವೀಕರಣಗೊಂಡು ಈಗ ಪ್ರಜ್ವಲಿಸುತ್ತಿದೆ. ಇಲ್ಲಿಗೆ ಒಮ್ಮೆ ಭೇಟಿ ನೀಡಿದರೆ ಮನಸ್ಸು ಮತ್ತೆ ಭೇಟಿ ನೀಡಲು ಪ್ರೇರೇಪಿಸುತ್ತದೆ.

    ಶ್ರೀ ಕ್ಷೇತ್ರದ ಪಕ್ಕ ದಲ್ಲಿರುವ ಪೆರಾರ ಮಹಾ ಸಂಸ್ಥಾನ ದಲ್ಲಿ ಕಳೆದ 31 ವಾರಗಳಿಂದ ಶ್ರೀ ಸುಧೀರ್ ಪ್ರಸಾದ್ ಶೆಟ್ಟಿ ಯವರ ನೇತೃತ್ವದಲ್ಲಿ ಪ್ರತೀ ಆದಿತ್ಯವಾರ ಸಂಜೆ 5:30 ರಿಂದ 7:30 ರವರೆಗೆ ಭಜನಾ ಕಾರ್ಯಕ್ರಮ ನಡೆಯುತ್ತಿದೆ. ಈ ವಾರ ದಿನಾಂಕ 29/05/2022 ರ ಆದಿತ್ಯವಾರದಂದು ತುಳುನಾಡ ರಕ್ಷಣಾ ವೇದಿಕೆಯ ಮಹಿಳಾ ಘಟಕದ ವತಿಯಿಂದ ಸಂಜೆ 5:30 ರಿಂದ 7:30 ರವರೆಗೆ ಭಜನಾ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮವನ್ನು ಅಂಬಿಕಾ ಅನ್ನಪೂರ್ಣೇಶ್ವರಿ ಭಜನಾ ಮಂಡಳಿಯ ಸದಸ್ಯರು ನಡೆಸಿಕೊಟ್ಟರು. ಭಜನಾ ಕಾರ್ಯಕ್ರಮದ ಬಳಿಕ ದೈವಸ್ಥಾನ ಅರ್ಚಕರಾದ ಮುರಳಿ ಭಟ್ ರವರು ಪ್ರಸಾದ ವಿತರಿಸಿದರು.ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಿತು.

    ಭಜನಾ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪದ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪು , ಮಹಿಳಾ ಘಟಕದ ಅಧ್ಯಕ್ಷರಾದ ಜ್ಯೋತಿಕಾ ಜೈನ್ , ಪ್ರಶಾಂತ್ ಭಟ್ ಕಡಬ , ದೇವಿ ಪ್ರಸಾದ್ ಶೆಟ್ಟಿ ,ಕಾಮಾಕ್ಷಿ, ಶಾರದಮ್ಮ , ಅಶೋಕ್ ಅದ್ಯಾರು, ಚಂದಪ್ಪ ಪೂಜಾರಿ , ಸುರೇಶ ವಿಟ್ಲ , ರಮೇಶ್ ಮೂಡಬಿದ್ರಿ ,ಜಗನ್ನಾಥ ಗಂಜಿಮಠ ,ರಕ್ಷಿತ, ಸುಮತಿ, ಶ್ವೇತ, ಕೃತಿಕ ಮತ್ತಿತರರು ಉಪಸ್ಥಿತರಿದ್ದರು. ದೈವಸ್ಥಾನದ ಭಜನಾ ಕಾರ್ಯಕ್ರಮದಲ್ಲಿ ಪ್ರತಿ ವಾರ ಭಾಗವಹಿಸುವ ಭಕ್ತರಾದ ಸುರೇಶ್ ಶೆಟ್ಟಿ ಅಳಕೆ ,ಹರೀಶ್ ಶೆಟ್ಟಿ ಕೋಲ್ಪೆ ,ಶಂಕರ್ ಮಾಡ, ಕಿಶೋರ್ ಕಬಿತ್ತಿಗುತ್ತು ,ನಟರಾಜ್ ,ಪ್ರಕಾಶ್ ,ರಕ್ಷಿತ್ ಮತ್ತಿತರರು ಭಾಗವಹಿಸಿದರು.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss