Friday, March 29, 2024
spot_img
More

    Latest Posts

    ಬೆಳ್ತಂಗಡಿ: ಬಳಂಜದ ಮನೆಯೊಂದರ ಅಂಗಳದಲ್ಲೇ ಚಿರತೆ ಪ್ರತ್ಯಕ್ಷ: ಸೆರೆಗೆ ಬೋನ್ ಕಾರ್ಯಾಚರಣೆ

    ಬೆಳ್ತಂಗಡಿ: ಬಳಂಜ ಗ್ರಾಮದ ಪರಾರಿ ನಿವಾಸಿ ರಾಮಣ್ಣ ಪೂಜಾರಿ ಎಂಬುವರ ಮನೆಯ ಅಂಗಳದಲ್ಲಿ ರಾತ್ರಿ ಚಿರತೆಯೊಂದು ಅಲೆದಾಡುತ್ತಿದ್ದ ದೃಶ್ಯ ಅವರ ಮನೆಯ ಸಿಸಿ ಕ್ಯಾಮರಾದಲ್ಲಿ ಜೂ.10 ರಂದು ಸೆರೆಯಾಗಿದೆ.

    ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆಯವರು ಇದರ ಸೆರೆಗಾಗಿ ಬೋನ್ ಕಾರ್ಯಾಚರಣೆ ನಡೆಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಈ ಗ್ರಾಮದಲ್ಲಿ ನಾಯಿ, ಬೆಕ್ಕುಗಳು ಕಾಣೆಯಾಗುತ್ತಿದ್ದು ಜನ ಆತಂಕದಲ್ಲಿದ್ದರು. ಇದೀಗ ಮನೆಯಂಗಳಕ್ಕೆ ಚಿರತೆಗಳು ಬರುವುದರಿಂದ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.

    ಇದೇ ಜೂನ್ 2 ರಂದು ಸುಲ್ಕೇರಿ ಸಮೀಪ ನಾವರ ಗ್ರಾಮದಲ್ಲಿ ವಸಂತ ಕೋಟ್ಯಾನ್ ಎಂಬುವರ ಮನೆಯ ಹಿಂಬದಿ ಬಾಯಿಗೆ ಚಿರತೆ ಬಿದ್ದತ್ತು. ಬಳಿಕ ಕಾರ್ಕಳ ಅರಣ್ಯ ಇಲಾಖೆ ತಂಡ ರಕ್ಷಿಸಿದ್ದರು. ಈ ಪ್ರದೇಶದಲ್ಲಿ ಆಗಾಗ ಚಿರತೆಗಳು ಪ್ರತ್ಯಕ್ಷವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಮನೆಯಂಗಳಕ್ಕೆ ಚಿರತೆ ಬಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದು ಈ ಬಗ್ಗೆ ಇದರ ಸೆರೆಗಾಗಿ ಬೋನ್ ಅಳವಡಿಕೆ ಮಾಡಿದ್ದೇವೆ. ಬೋನಿನೊಳಗೆ ನಾಯಿಯನ್ನು ಇಡಲಾಗಿದ್ದು ಶೀಘ್ರವಾಗಿ ಸೆರೆ ಹಿಡಿಯಲಾಗುವುದು ಎಂದು ಅಳದಂಗಡಿ ಉಪ ವಲಯ ಅರಣ್ಯಾಧಿಕಾರಿ ಸುರೇಶ್ ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss