ಮಂಗಳೂರು: ಮಕ್ಕಳ ಕಳ್ಳನೆಂಬ ಶಂಕೆಯಲ್ಲಿ ವ್ಯಕ್ತಿಯೋರ್ವನಿಗೆ ಸಾರ್ವಜನಿಕರು ಥಳಿಸಿದ ಘಟನೆ ನಡೆದಿದೆ.
ವೆನ್ಲಾಕ್ ಆಸ್ಪತ್ರೆ ಬಳಿ ತಾಯಿಯೊಂದಿಗೆ ನಿಂತಿದ್ದ ಮಗುವನ್ನು ವ್ಯಕ್ತಿಯೋರ್ವ ಎಳೆದಾಡಿದ್ದ. ಈ ವೇಳೆ ಗಮನಿಸಿದ ಮಗುವಿನ ತಾಯಿ ಕಿರುಚಾಡಿದ್ದಾರೆ. ಇದನ್ನು ಕಂಡು ಸ್ಥಳದಲ್ಲಿ ಸಾರ್ವಜನಿಕರು ಸೇರಿ ಆತನಿಗೆ ವಿಚಾರಿಸಿದ್ದಾರೆ. ಈ ವೇಳೆ ಸರಿಯಾಗಿ ಉತ್ತರಿಸದ ಆತನಿಗೆ ಸಾರ್ವಜನಿಕರು ಅಲ್ಲೇ ಹಲ್ಲೆ ನಡೆಸಿದ್ದಾರೆ.ಘಟನೆಯ ವಿಡಿಯೋ ವೈರಲ್ ಆಗಿದೆ.
