ಉಡುಪಿ: ಹೆಚ್ಚಿನ ಪ್ರಮಾಣದಲ್ಲಿ ಶಬ್ದ ಹೊರ ಸೂಸುವ ಸುಡುಮದ್ದುಗಳ (ಅಪಾಯಕಾರಿ ಸುಡುಮದ್ದು) ಉತ್ಪಾದನೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ನಿಯಮ ಉಲ್ಲಂ ಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದೀಪಾವಳಿ ಸಮಯದಲ್ಲಿ ಪ್ರತಿಯೊಬ್ಬರೂ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸುಡುಮದ್ದನ್ನು ಲೈಸನ್ಸ್ ಹೊಂದಿರುವ ಮರಾಟಗಾರರಿಂದ ಖರೀದಿಸಬೇಕು, ಕಾನೂನು ಬಾಹಿರವಾದ ಸುಡುಮದ್ದುಗಳನ್ನು ಉಪಯೋಗಿಸಬಾರದು. ಮಕ್ಕಳು ಸುಡುಮದ್ದುಗಳನ್ನು ಬಳಸಲು ಅನುವು ಮಾಡಿಕೊಡದಂತೆ ಪೋಷಕರು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.