Wednesday, May 25, 2022

ಬ್ರಹ್ಮಾವರ: ಬೆಂಕಿ ಕಾಣಿಸಿಕೊಂಡ ಸ್ಥಿತಿಯಲ್ಲಿ ಕಾರು ಪತ್ತೆ; ಸುಟ್ಟು ಕರಕಲಾದ ಯುವಕ – ಯುವತಿ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ಸಮೀಪ ಸುಟ್ಟು ಕರಕಲಾದ ಕಾರು ಮತ್ತು ಕಾರಿನೊಳಗೆ ಜೋಡಿ ಮೃತದೇಹ ನಿಗೂಢವಾಗಿ ಪತ್ತೆಯಾಗಿದೆ.ಮಂದರ್ತಿ ಸಮೀಪ ಹೆಗ್ಗುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊತ್ತೂರು...
More

  Latest Posts

  BIG NEWS: ರಾಸಾಯನಿಕ ಸೋರಿಕೆ; 6 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

  ಮಡಿಕೇರಿ: ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆಯಾದ ಪರಿಣಾಮ 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ನೆಲ್ಯಾಹುದಿಕೇರಿಯಲ್ಲಿ ನಡೆದಿದೆ. ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ...

  ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಕಳ್ಳತನ

  ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ.ಕೊಳ್ನಾಡು ಗ್ರಾಮ ಕಟ್ಟೆ ಮನೆ...

  ರಸ್ತೆ ಕಾಮಗಾರಿ ವಿರೋಧಿಸಿ ರಸ್ತೆಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದ ವೃದ್ಧೆ..!

  ಮಂಗಳೂರು: ಮಹಾನಗರಪಾಲಿಕೆ ಕಾಂಕ್ರೀಟೀಕರಣ ಮಾಡುವ ವೇಳೆ ವೃದ್ದ ಮಹಿಳೆಯೊಬ್ಬರು ಈ ಸ್ಥಳ ಖಾಸಗಿಯಾಗಿದ್ದು ಜಾಗ ನನ್ನದು ಎಂದು ನಡು ರಸ್ತೆಯಲ್ಲೇ ಮಲಗಿ ಅಡ್ಡಿಪಡಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಇಂದು...

  ಕುಕ್ಕೆ ಸುಬ್ರಮಣ್ಯ ದೇವರ ಸೇವೆಗೆ ತಮ್ಮನ್ನು ಮರುನೇಮಕ ಮಾಡುವಂತೆ DC ಗೆ ಮನವಿ

  ಸುಬ್ರಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಂಚಪರ್ವ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಮತ್ತು ತಮ್ಮನ್ನು ಮರುನೇಮಕ ಮಾಡುವಂತೆ ಒತ್ತಾಯಿಸಿ ಪಂಚಪರ್ವ ಸಿಬ್ಬಂದಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

  ಕೆಎಎಸ್ ಕನಸನ್ನು ನನಸಾಗಿಸಿಕೊಳ್ಳಲು ಜಮೀನಿನಲ್ಲಿ ಕೆಲಸ ಮಾಡಿ ಹಣ ಹೊಂದಿಸುತ್ತಿರುವ ಬುಡಕಟ್ಟು ಯುವತಿ!

  ಮೈಸೂರು: ಕಾಡಿನ ಅಂಚಿನಿಂದ ಬಂದಿದ್ದರೂ ಮತ್ತು ಬುಡಕಟ್ಟು ಸಂಪ್ರದಾಯದ ಮಂದಿ ವಿರೋಧಿಸಿದ್ದರೂ 22 ವರ್ಷದ ಬುಡಕಟ್ಟು ಯುವತಿಯೊಬ್ಬರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು ಇದೀಗ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ಅಧಿಕಾರಿಯಾಗುವ ಕನಸಿನ ಹಿಂದೆ ಬಿದ್ದಿದ್ದಾರೆ.

  ಅನುರಾಧಾ, ತನ್ನ ಕೋಚಿಂಗ್ ತರಗತಿಗಳಿಗೆ ಸಾಕಷ್ಟು ಹಣವಿಲ್ಲದ ಕಾರಣ ಮುಂದಿನ ಹಾದಿ ಕಠಿಣವಾಗಿದ್ದು ಈ ಪರಿಣಾಮ ಅವರೀಗ ತನ್ನ ತರಬೇತಿಗಾಗಿ ಸಾಕಷ್ಟು ಹಣ ಒಟ್ಟುಗೂಡಿಸಲು ಹೊಲಗಳಲ್ಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನ ಡಿಬಿ ಕುಪ್ಪೆ ಬಳಿಯ ತಿಮ್ಮನಹೋಸಹಳ್ಳಿ ಕುಗ್ರಾಮದಿಂದ ಬಂದ ಅನುರಾಧಾ ಉನ್ನತ ಶಿಕ್ಷಣವನ್ನು ಪಡೆದ ಅಪರೂಪದ ಬುಡಕಟ್ಟು ಮಹಿಳೆಯರಲ್ಲಿ ಒಬ್ಬರು. ಇವರು ತಾಯಿಯೊಂದಿಗೆ ಬೆಳೆದಿದ್ದು ಚಿಕ್ಕ ವಯಸ್ಸಿನಲ್ಲೇ ವಿಧವೆಯಾಗಿಯೂ ಮಗಳು ಉತ್ತಮ ಶಿಕ್ಷಣ ಪಡೆಯಲು ಶ್ರಮಿಸಿದ್ದಾರೆ.

  ತನ್ನ ಬುಡಕಟ್ಟು ಸಮುದಾಯದ ಇತರೆ ಬಾಲಕಿಯರು ಶಿಕ್ಷಣ ಪಡೆಯಲು ಸಾಧ್ಯವಾಗದೆ ಕಷ್ಟದ ಜೀವನ ನಡೆಸುವುದನ್ನು ಕಂಡಾಗ ತನಗೆ ಕೆಎಎಸ್ ಮಾಡುವ ಕನಸು ಚಿಗುರಿತು ಎಂದು ಅನುರಾಧಾ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಾಗಿರುವ ಯುವಕರಿಗಾಗಿ ಸಮಾಜ ಕಲ್ಯಾಣ ಇಲಾಖೆಯು ಪರೀಕ್ಷಾ ಪೂರ್ವ ತರಬೇತಿ ಕೇಂದ್ರ (ಪಿಇಟಿಸಿ) ಕಾರ್ಯಕ್ರಮವನ್ನು ಹೊಂದಿದೆ ,ಐಎಎಸ್ ಮತ್ತು ಕೆಎಎಸ್ ನಂತಹ, ಪರೀಕ್ಷೆಗೆ ಅಲ್ಲಿ ಸಿದ್ದತೆ ನಡೆಸಬಹುದು. . “ಈ ವರ್ಷ, ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿತ್ತು ಮತ್ತು ಕೊನೆಯ ದಿನಾಂಕ ಡಿಸೆಂಬರ್‌ನಲ್ಲಿತ್ತು. ನಾನು ಅದರ ಬಗ್ಗೆ ತಡವಾಗಿ ತಿಳಿದುಕೊಂಡೆ ಮತ್ತು ಮೇಲಾಗಿ, ಸಾಂಕ್ರಾಮಿಕ ರೋಗದಿಂದಾಗಿ ನಮ್ಮ ಗುರಿ ಪೂರೈಸಲು ನಾವು ಹೆಣಗಾಡುವಂತಾಯಿತು.” ಅವರು ಹೇಳಿದ್ದಾರೆ.

  ಅನುರಾಧಾ ತಮ್ಮ ತರಬೇತಿಗಾಗಿ ಅನೇಕ ಖಾಸಗಿ ತರಬೇತಿ ಕೇಂದ್ರಗಳನ್ನು ಸಂಪರ್ಕಿಸಿದರು, ಆದರೆ ಶುಲ್ಕವನ್ನು ಭರಿಸಲಾಗಲಿಲ್ಲ. “ಅವರು ವಾಸ್ತವ್ಯದ ಹೊರತಾಗಿ ಕೋಚಿಂಗ್‌ಗಾಗಿ 60,000 ರೂ. ಕೇಳುತ್ತಾರೆ. ನಾನು ಜಮೀನಿನಲ್ಲಿ ಕೆಲಸ ಮಾಡುವ ವೇತನದಿಂದ ಹಣವನ್ನು ಉಳಿಸುವುದು ಕಷ್ಟ, ಆದರೆ ನನಗೆ ಬೇರೆ ದಾರಿಯಿಲ್ಲ. ನಾನು ಉತ್ತಮ ಸಂಬಳ ಪಡೆಯುವ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದೇನೆ, ಆದರೆ ಇಲ್ಲಿಯವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.”

  ಅನುರಾಧದಂತಹ ಬುಡಕಟ್ಟು ಯುವತಿ ಸ್ನಾತಕೋತ್ತರ ಪದವಿಯನ್ನು ಪಡೆಯುವುದು ದೊಡ್ಡ ಸಾಧನೆ ಎಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಕಲಾ ಒಕ್ಕೂಟದ ಶರಣೇಂದ್ರ ಹೇಳಿದ್ದಾರೆ.. “ಯಾವುದೇ ಕಷ್ಟದಲ್ಲಿಯೂ ತನ್ನ ಕನಸನ್ನು ಮುಂದುವರಿಸಲು ಆಕೆಗೆ ಸಹಾಯ ನಿರಾಕರಿಸಬಾರದು. ನಮ್ಮ ಸಮುದಾಯದಿಂದ ಅಂತಯಾ ಯುವತಿಯರು ಆಡಳಿತಾಧಿಕಾರಿಗಳಗಿ ಯಶಸ್ವಿಯಾದರೆ  ಅದು ಇತರ ಹೆಣ್ಣು ಮಕ್ಕಳಿಗೆ ಸ್ಪೂರ್ತಿದಾಯಕವಾಗಲಿದೆ.ಆಕೆಯ ಕೋಚಿಂಗ್‌ಗೆ ಧನಸಹಾಯ ನೀಡಲು ಅಧಿಕಾರಿಗಳು ಮುಂದೆ ಬರಬೇಕು, ” ಅವರು ಹೇಳಿದ್ದಾರೆ.

  ಬುಡಕಟ್ಟು ಕಲ್ಯಾಣ ಇಲಾಖೆಯ ಸಮಗ್ರ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮ ಸಂಯೋಜಕರಾದ ಪ್ರಕಾಶ್ ಅವರನ್ನು ಟಿಎನ್‌ಐಇ ಸಂಪರ್ಕಿಸಿದಾಗ, ಅವರು ಬಯಸಿದ ನಗರದಲ್ಲಿ ಆಕೆಯ ವಸತಿ ಸೌಕರ್ಯವನ್ನು ಇಲಾಖೆ ನೋಡಿಕೊಳ್ಳಲಿದೆ ಎಂದು ಹೇಳಿದರು, ಆದರೆ ಇದಾಗಲೇ ಅಂತಿಮ ಗಡುವು ಮುಗಿದಿರುವ ಕಾರಣ ಪಿಇಟಿಸಿ ಕಾರ್ಯಕ್ರಮಕ್ಕೆ ಪ್ರವೇಶಿಸಲು ಅವರಿಗೆ ಸಾಧ್ಯವಾಗದಿರಬಹುದು ಎಂದು ಅವರು ಹೇಳಿದ್ದಾರೆ.

  Latest Posts

  BIG NEWS: ರಾಸಾಯನಿಕ ಸೋರಿಕೆ; 6 ವಿದ್ಯಾರ್ಥಿಗಳು ಅಸ್ವಸ್ಥ; ಆಸ್ಪತ್ರೆಗೆ ದಾಖಲು

  ಮಡಿಕೇರಿ: ಲಾರಿಯಿಂದ ರಾಸಾಯನಿಕ ದ್ರವ ಸೋರಿಕೆಯಾದ ಪರಿಣಾಮ 6 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ನೆಲ್ಯಾಹುದಿಕೇರಿಯಲ್ಲಿ ನಡೆದಿದೆ. ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ...

  ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಕಳ್ಳತನ

  ಬಂಟ್ವಾಳ: ಮನೆಯ ಮಾಡಿನ ಹಂಚು ತೆಗೆದು ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಕೊಳ್ನಾಡು ಗ್ರಾಮದ ಕಟ್ಟೆ ಮನೆ ಎಂಬಲ್ಲಿ ನಡೆದಿದೆ.ಕೊಳ್ನಾಡು ಗ್ರಾಮ ಕಟ್ಟೆ ಮನೆ...

  ರಸ್ತೆ ಕಾಮಗಾರಿ ವಿರೋಧಿಸಿ ರಸ್ತೆಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದ ವೃದ್ಧೆ..!

  ಮಂಗಳೂರು: ಮಹಾನಗರಪಾಲಿಕೆ ಕಾಂಕ್ರೀಟೀಕರಣ ಮಾಡುವ ವೇಳೆ ವೃದ್ದ ಮಹಿಳೆಯೊಬ್ಬರು ಈ ಸ್ಥಳ ಖಾಸಗಿಯಾಗಿದ್ದು ಜಾಗ ನನ್ನದು ಎಂದು ನಡು ರಸ್ತೆಯಲ್ಲೇ ಮಲಗಿ ಅಡ್ಡಿಪಡಿಸಿದ ಘಟನೆ ಮಣ್ಣಗುಡ್ಡ ಗುರ್ಜಿ ಬಳಿ ಇಂದು...

  ಕುಕ್ಕೆ ಸುಬ್ರಮಣ್ಯ ದೇವರ ಸೇವೆಗೆ ತಮ್ಮನ್ನು ಮರುನೇಮಕ ಮಾಡುವಂತೆ DC ಗೆ ಮನವಿ

  ಸುಬ್ರಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪಂಚಪರ್ವ ಸಿಬ್ಬಂದಿಗಳನ್ನು ಕೆಲಸದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಮತ್ತು ತಮ್ಮನ್ನು ಮರುನೇಮಕ ಮಾಡುವಂತೆ ಒತ್ತಾಯಿಸಿ ಪಂಚಪರ್ವ ಸಿಬ್ಬಂದಿಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರು.

  Don't Miss

  ಕುಲಶೇಖರ ಕಲ್ಪನೆ ಬಳಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ

  ಮಂಗಳೂರು: ಎರಡು ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ಮಂಗಳೂರು ಕುಲಶೇಖರ ಕಲ್ಪನೆ ಬಳಿ ಬೃಹತ್ ಮರವೊಂದು ಧರಾಶಾಹಿಯಾಗಿದೆ. ರಸ್ತೆ ಬದಿಯಲ್ಲಿದ್ದ ಮರವು ಬುಡಸಮೇತ ಕಿತ್ತು ರಸ್ತೆಗೆ ಅಡ್ಡಲಾಗಿ...

  SSLC Result 2022: ಒಟ್ಟಿಗೆ ಪರೀಕ್ಷೆ ಬರೆದ ತಾಯಿ,ಮಗಳು – ಪಾಸ್​

  ವಿಜಯನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಒಟ್ಟಿಗೆ ಬರೆದ ತಾಯಿ - ಮಗಳು ಉತ್ತೀರ್ಣರಾಗಿದ್ದಾರೆ. ವಿಜಯನಗರದ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ನಿವಾಸಿ, ಚಿಲುಗೋಡಿ ಹೈಸ್ಕೂಲ್‌ ಶಿಕ್ಷಕ ಬಿ.ರಾಮಜ್ಜರ ಪತ್ನಿ ಸವಿತಾ (37) ಹಾಗೂ...

  ಕೆನಡಾ ಸಂಸತ್ ನಲ್ಲಿ ಮೊಳಗಿದ ಕನ್ನಡದ ಕಂಪು…!!

  ಕೆನಡಾ : ಕೆನಡಾ ಸಂಸತ್ ನಲ್ಲಿ ಕನ್ನಡದಲ್ಲಿ ಭಾಷಣ ಮಾಡುವ ಮೂಲಕ ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಅವರು ಇತಿಹಾಸ ನಿರ್ಮಿಸಿದ್ದಾರೆ. ತುಮಕೂರು...

  ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ಭೀಕರ ಅಪಘಾತ – ಇಬ್ಬರು ಯುವಕರು ಸ್ಥಳದಲ್ಲೇ ಸಾವು

  ಮೈಸೂರು : ಮೈಸೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ನಂಜನಗೂಡು ಸಿಂಧುವಳ್ಳಿ ಬಳಿಯ ಹುಣಸನಾಳು...

  ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ : ಆರೋಪಿ ಬಂಧನ

  ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್​ ಇಟ್ಟು ಸ್ಫೊಟಿಸುವುದಾಗಿ ಇಂದು(ಶುಕ್ರವಾರ) ಮುಂಜಾನೆ ಬೆದರಿಕೆ ಹಾಕಿ ಕೆಲ ಕಾಲ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾವನ ಮೇಲಿನ ಸೇಡಿಗಾಗಿ ಏರ್‌ಪೋರ್ಟ್‌ಗೆ...