Home ಮನೋರಂಜನೆ ರಾಷ್ಟ್ರಮಟ್ಟದ ಆನ್‌ಲೈನ್ ಫೋಟೋ ಸ್ಪರ್ಧೆ “ತೌಳವ ಪೊರ್ಲು ಬಾಲೆ 2021” ವಿಜೇತರಿಗೆ ಬಹುಮಾನ ವಿತರಣ ಕಾರ್ಯಕ್ರಮ

ರಾಷ್ಟ್ರಮಟ್ಟದ ಆನ್‌ಲೈನ್ ಫೋಟೋ ಸ್ಪರ್ಧೆ “ತೌಳವ ಪೊರ್ಲು ಬಾಲೆ 2021” ವಿಜೇತರಿಗೆ ಬಹುಮಾನ ವಿತರಣ ಕಾರ್ಯಕ್ರಮ

0
128

ಮಕ್ಕಳ ದಿನಾಚರಣೆಯ ಪ್ರಯುಕ್ತ ತುಳುನಾಡ ಸೂರ್ಯ ನ್ಯೂಸ್ ಮತ್ತು ತುಳುನಾಡ ರಕ್ಷಣಾ ವೇದಿಕೆ (ರಿ) ಅರ್ಪಿಸುವ ತೌಳವ ಪೊರ್ಲು ಬಾಲೆ 2021 ರಾಷ್ಟ್ರಮಟ್ಟದ ಆನ್‌ಲೈನ್ ಫೋಟೋ ಸ್ಪರ್ಧೆ ಎರ್ಪಡಿಸಲಾಗಿದ್ದು. ತೌಳವ ಪೊರ್ಲು ಬಾಲೆ 2021 ರಾಷ್ಟ್ರಮಟ್ಟದ ಆನ್‌ಲೈನ್ ಫೋಟೋ ಸ್ಪರ್ಧೆಯಲ್ಲಿ -ತೌಳವ ಪೊರ್ಲು ಬಾಲೆ2021 ಪ್ರಥಮ ಉದಿತ್. ಎಮ್ ಕೋಟ್ಯಾನ್ , ತೌಳವ ಪೊರ್ಲು ಬಾಲೆ 2021 ದ್ವಿತೀಯ ತನಿಸ್ಕಾ ಎಕ್ಕೂರು, ತೌಳವ ಪೊರ್ಲು ಬಾಲೆ
ಅದ್ರಷ್ಟ ಶಾಲಿ2021 ಪ್ರಶಸ್ತಿ ಯನ್ನು ಪ್ರೀಶಾ ಪ್ರದೀಪ್ ಕುಮಾರ್ ಸುದೇಕರ್ ವಿಜೇತರಾಗಿದ್ದಾರೆ.


ತುಳುನಾಡ ಸೂರ್ಯ ಪೇಜ್ ಈ ಸ್ಪರ್ಧೆ ಸುಮಾರು 1ಲಕ್ಷದ 86 ಸಾವಿರದ 400 ವೀಕ್ಷಿಸಿದ್ದು ಜನರು ತಮ್ಮ ಅಭಿಪ್ರಾಯ ಮತ್ತು ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಸ್ಪರ್ಧೆ ಯಶಸ್ವಿಯಾಗಿದೆ. 14-11-2021 ರವಿವಾರ ಸಂಜೆ 4.00ಗಂಟೆಗೆ ಮಕ್ಕಳ ದಿನಾಚರಣೆ ದಿನ ದಂದು ಮಂಗಳೂರು ಸ್ಟೇಟ್ ಬ್ಯಾಂಕ್ ಬಳಿಯ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಕಚೇರಿಯಲ್ಲಿ ತುರವೇ ಅಂತಾರಾಷ್ಟ್ರೀಯ ಗೌರವ ಅಧ್ಯಕ್ಷರಾದ ಡಾ. ಡೇವಿಡ್ ಫ್ರಾಂಕ್ ಫರ್ನಾಂಡಿಸ್, ಮೋಹನ್ ಮೆಂಡನ್, ಪ್ರಶಾಂತ್ ಭಟ್ ಕಡಬ, ಕ್ಲಿಟಸ್ ಲೋಬೋ, ಹರೀಶ್ ಶೆಟ್ಟಿ , ವರ್ಷಿತ ಸಂದೀಪ್, ಗೈಟನ್, ಪಾರುಖ್, ಮುನೀರ್ ಮುಕ್ಕಚೇರಿ, ರೋಶನ್ ಡಿಸೋಜ , ರಾದೀಕ , ಶೋನ್ ಡಿಸೋಜ, ಸುಪ್ರೀತ್ ಪೂಜಾರಿ, ಅರುಣ್ ಪೇರಾವೊ, ಮತ್ತಿತರರ ಗಣ್ಯರ ಉಪಸ್ಥಿತಿಯಲ್ಲಿ ತೌಳವ ಪೊರ್ಲು ಬಾಲೆ 2021 ರಾಷ್ಟ್ರ ಮಟ್ಟದ ಆನ್ ಲೈನ್ ಪೋಟೋ ಸ್ಪರ್ಧೆ ಯಲ್ಲಿ ಪ್ರಥಮ ಉದಿತ್. ಎಮ್ ಕೋಟ್ಯಾನ್ ತೌಳವ ಪೊರ್ಲು ಬಾಲೆ 2021 ದ್ವಿತೀಯ ತನಿಸ್ಕಾ ಎಕ್ಕೂರು ರವರನ್ನು ತುಳುನಾಡ ರಕ್ಷಣಾ ವೇದಿಕೆ ಕಚೇರಿಯಲ್ಲಿ ಬಿರುದು ನೀಡಿ ಪ್ರಶಸ್ತಿ ಪ್ರದಾನ , ಹಾಗೂ ನಗದು ಬಹುಮಾನ, ಟ್ರೋಫಿ, ನೀಡಿ ಗೌರವಿಸಲಾಯಿತು . ಹಾಗೂ ಸ್ಪರ್ಧೆಯಲ್ಲಿ ತೌಳವ ಪೊರ್ಲು ಬಾಲೆ ಅದೃಷ್ಟಶಾಲಿ2021 ಪ್ರಶಸ್ತಿ ಯನ್ನು ಪ್ರೀಶಾ ಪ್ರದೀಪ್ ಕುಮಾರ್ ಸುದೇಕರ್ ಬಿರುದು ನೀಡಿ ಪ್ರಶಸ್ತಿ ಪ್ರದಾನ , ಟ್ರೋಫಿ ನೀಡಿ ಗೌರವಿಸಲಾಯಿತು . ಭಾಗವಹಿಸಲು ಆಯ್ಕೆ ಪಡೆದಿದ್ದ ಮಕ್ಕಳಿಗೆ ಪ್ರಶಂಸಾ ಪ್ರಶಸ್ತಿ ಪತ್ರ ಕೊಡಲಾಯಿತು.

NO COMMENTS

LEAVE A REPLY

Please enter your comment!
Please enter your name here