ಉದ್ಯಾವರ: ಉದ್ಯಾವರದಿಂದ ಹೊರಟಿದ್ದ ಅಯ್ಯಪ್ಪ ಮಾಲಾಧಾರಿಯೊಬ್ವರು ಶಬರಿಮಲೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಸುರೇಶ್ ಬಂಗೇರ ( 52) ಹೃದಯಾಘಾತಕ್ಕೀಡಾದವರು.ಉದ್ಯಾವರ ಸಂಪಿಗೆನಗರದಲ್ಲಿ ಇವರು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.
ಉದ್ಯಾವರದ ಅಯ್ಯಪ್ಪ ಮಂದಿರದಿಂದ 32 ಸ್ವಾಮಿಗಳ ಜೊತೆ ಹೊರಟ ಸುರೇಶ್ ಬಂಗೇರ, ಮಹಾಪೂಜೆ ಮಾಡಿ ಇರುಮುಡಿ ಕಟ್ಟಿ ನಿನ್ನೆ ರೈಲು ಮುಖಾಂತರ ಹೊರಟಿದ್ದರು.ದಾರಿ ಮಧ್ಯೆ ಹೃದಯಾಘಾತಕ್ಕೀಡಾಗಿ ಮೃತರಾಗಿದ್ದಾರೆ.ಮೃತರು, ಪತ್ನಿ ,ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.