Thursday, March 28, 2024
spot_img
More

    Latest Posts

    ಅ.1ರಿಂದ ಉಡುಪಿ ಜಿಲ್ಲೆಯಾದ್ಯಂತ ಅಟೋರಿಕ್ಷಾ ಕನಿಷ್ಠ ದರ 40 ರೂ. ಏರಿಕೆ

    ಉಡುಪಿ: ಉಡುಪಿ ಜಿಲ್ಲಾ ಸಾರಿಗೆ ಪ್ರಾಧಿಕಾರವು ಅಕ್ಟೋಬರ್ ಒಂದರಿಂದ ಜಾರಿಗೆ ಬರುವಂತೆ ಉಡುಪಿ ಜಿಲ್ಲೆಯಲ್ಲಿ ಸಂಚರಿಸುವ ಅಟೋರಿಕ್ಷಾಗಳಿಗೆ ಪ್ರಯಾಣ ದರವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಅದರಂತೆ 1.5ಕಿ.ಮೀ.ವರೆಗೆ ಕನಿಷ್ಠ ದರವನ್ನು 40 ರೂ.ಗೆ ಏರಿಸಲಾಗಿದೆ.

    ಅನಂತರದ ಪ್ರತಿ ಕಿ.ಮೀ.ಗೆ ದರವನ್ನು 20ರೂ.ಗೆ ನಿಗದಿ ಪಡಿಸಲಾಗಿದೆ. ಆದುದರಿಂದ ಜಿಲ್ಲೆಯ ಎಲ್ಲಾ ಅಟೋರಿಕ್ಷಾ ಚಾಲಕ, ಮಾಕರು ತಮ್ಮ ಅಟೋರಿಕ್ಷಾಗಳಿಗೆ ಕಾನೂನಿ ಪ್ರಕಾರ ಅನುಮತಿ ಇರುವ ಫಾಗ್ ಮೀಟರ್ ಕಡ್ಡಾಯವಾಗಿ ಅಳವಡಿಸಿಕೊಂಡು ಮೇಲಿನ ದರಕ್ಕೆ ಅನುಗುಣವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಸೆ.31ರೊಳಗೆ ಕಡ್ಡಾಯವಾಗಿ ರಿಕ್ಯಾಲೀಬರೇಷನ್ ಹಾಗೂ ಸೀಲ್ ಮಾಡಿಸಿಕೊಳ್ಳುವಂತೆ, ತಪ್ಪಿದರೆ ಕಾನೂನು ಕ್ರಮ ಎದುರಿಸುವಂತೆ ಉಡುಪಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಪ್ರಭಾರ ಕಾರ್ಯದರ್ಶಿ ರವಿಶಂಕರ್ ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss