ಉಪ್ಪಿನಂಗಡಿ:ಎಟಿಎಂ ನ ಹಣ ಸಾಗಿಸುವ ವಾಹನ ಹಾಗೂ ಅಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ಅಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ನೆಕ್ಕಿಲಾಡಿಯ ಬೊಳ್ಳಾರು ಸಮೀಪ ನಡೆದಿದೆ.
ಮೃತ ರಿಕ್ಷಾ ಚಾಲಕನನ್ನು ಉಪ್ಪಿನಂಗಡಿಯ ಸುಭಾಶ್ ನಗರ ನಿವಾಸಿ, ವಾಸು ಪೂಜಾರಿ (50 ವರ್ಷ) ಎಂದು ಗುರುತಿಸಲಾಗಿದೆ.
ಎಟಿಎಂ ವಾಹನ ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದರೆ, ಅಟೋ ರಿಕ್ಷಾ ಉಪ್ಪಿನಂಗಡಿ ಕಡೆಗೆ ತೆರಳುತ್ತಿತ್ತು. ಘಟನೆಯಲ್ಲಿ ಅಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ವಾಸು ಪೂಜಾರಿ ಅವರು ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.