Friday, April 19, 2024
spot_img
More

    Latest Posts

    ಬಂಟ್ವಾಳ: ಮಾರಾಟಕ್ಕೆ ನಿಷೇಧವಿದ್ದ ಸಿಮೆಂಟ್ ಮಾರಾಟಕ್ಕೆ ಯತ್ನ-ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ

    ಬಂಟ್ವಾಳ: ಮಾರಾಟ ಮಾಡಲು ಅವಕಾಶ ಇಲ್ಲದ ಸಿಮೆಂಟ್ ನ್ನು ಮನೆಕಟ್ಟವು ಉದ್ದೇಶದಿಂದ ದಾಸ್ತಾನು ಇರಿಸಿದ್ದ ಜಾಗಕ್ಕೆ ತಹಶೀಲ್ದಾರ್ ನೇತೃತ್ವದ ತಂಡ ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಪಲ್ಲಮಜಲು ಎಂಬಲ್ಲಿ ನಡೆದಿದೆ.

    ದಾಳಿ ವೇಳೆ ಪಲ್ಲಮಜಲು ನಿವಾಸಿ ಸೋಮಸುಂದರ ಕೆ. ಅವರ ಮನೆ ನಿರ್ಮಾಣದ ಜಾಗದಲ್ಲಿ ಮಾರಾಟಕ್ಕೆ ಅವಕಾಶವಿಲ್ಲದ 21ಸಿಮೆಂಟ್ ಗೋಣಿ ಚೀಲ ಹಾಗು ಇದರ ಜೊತೆಗೆ ಖಾಲಿಯಾದ ಐದು ಗೋಣಿ ಸಿಮೆಂಟ್ ಚೀಲಗಳು ಪತ್ತೆಯಾಗಿದೆ.

    ಅಕ್ರಮ ಸಿಮೆಂಟ್ ದಾಸ್ತಾನು ಇರಿಸಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಅಧಿಕಾರಿಗಳು ಸಿಮೆಂಟ್ ನ್ನು ವಶಕ್ಕೆ ಪಡೆದುಕೊಂಡು ಪರಿಶೀಲನೆ ನಡೆಸಿದ್ದಾರೆ.

    ಬಳಿಕ ಹೆಚ್ಚಿನ ತನಿಖೆಗಾಗಿ ಬಂಟ್ವಾಳ ಪುರ ಸಭೆಗೆ ಪ್ರಕರಣವನ್ನು ವಹಿಸಲಾಗಿದ್ದು, ತನಿಖೆ ಮುಂದುವರೆದಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss