Tuesday, April 16, 2024
spot_img
More

    Latest Posts

    ಆಟಿ ಅಮಾವಾಸ್ಯೆಯ ದಿನ ಶ್ರೀ ಕ್ಷೇತ್ರ ಕಾರಿಂಜದಲ್ಲಿ ಭಕ್ತರಿಗೆ ಪಾಲೆದ ಕೆತ್ತೆದ ಕಷಾಯ

    ಬಂಟ್ವಾಳ: ಆಟಿ ಅಮಾವಾಸ್ಯೆಯ ದಿನ ಶ್ರೀ ಕ್ಷೇತ್ರ ಕಾರಿಂಜದಲ್ಲಿಎಲ್ಲಾ ಭಕ್ತರಿಗೆ ದೊರೆಯಲಿದೆ ಪಾಲೆದ ಕೆತ್ತೆದ ಕಷಾಯ 28/07/2022ನೇ ಗುರುವಾರ ನಡೆಯಲಿರುವ, ಪುರಾಣ ಪ್ರಸಿದ್ದ ನಾಲ್ಕು ಯುಗದ ಚರಿತ್ರೆ ಇರುವ ಶ್ರೀ ಕಾರಿಂಜೇಶ್ವರ ದೇವರ ಆಟಿ ಅಮಾವಾಸ್ಯೆ ತುಳು ಸಂಪ್ರದಾಯದ ಅಡಿಯಲ್ಲಿ ಒಟ್ಟು ಸೇರುವ ದೊಡ್ಡ ಹಬ್ಬವಾಗಿದೆ.ಈ ವರ್ಷ ತುಳುವರ ಸಂಪ್ರದಾಯವಾದ ಹಾಳೆ ಮರದ ಕೆತ್ತೆಯ ಕಷಾಯ ಪ್ರತಿಯೊಬ್ಬ ಭಕ್ತನಿಗೂ ಹಂಚುವ ಕಾರ್ಯಕ್ಕೆ ಭಕ್ತರು ರೂಪರೇಷೆಗಳನ್ನು ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ರೋಗ ಹರನಾದ ಶಂಕರ ಸರ್ವರ ಸರ್ವ ರೋಗವನ್ನು ಹರಣ ಮಾಡಿ ಲೋಕಕಲ್ಯಾಣ ಮಾಡಲಿ ಅನ್ನುವ ಶ್ರೇಷ್ಠ ಉದ್ದೇಶದಿಂದ ಹಂಚುವ ಈ ಔಷದಿಯ ಸದುಪಯೋಗ ಪಡೆಯಲು ಆಸ್ತಿಕ ಸಮಾಜದ ಭಕ್ತರಲ್ಲಿ ಆಡಳಿತ ಮಂಡಳಿ ವಿನಂತಿಸಿಕೊಂಡಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss