Monday, May 23, 2022

ಮಂಗಳೂರು:ಕಬಡ್ಡಿಯಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ಉದಯ ಚೌಟ ಇನ್ನಿಲ್ಲ

ಬಂಟ್ವಾಳ: ಅಂತಾರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ, ಬ್ಯಾಂಕ್ ಉದ್ಯೋಗಿ ಮಾಣಿ ಬದಿಗುಡ್ಡೆ ನಿವಾಸಿ ಉದಯ ಚೌಟ ಅವರು ಮೇ 21ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ, ಪುತ್ರ...
More

    Latest Posts

    ಭಾರಿ ವೈರಲ್‌ ಆಗುತ್ತಿದೆ ಈ ಬಾಳೆಹಣ್ಣಿನ ಮೇಲಿರುವ ಬರಹ ; ಏನೆಂದು ಬರೆಯಲಾಗಿದೆ ಗೊತ್ತಾ?

    ತುಮಕೂರು: ಈ ಹಿಂದೆ ಹಲವು ಬಾರಿ ರಥೋತ್ಸವದ ಸಂದರ್ಭದಲ್ಲಿ, ಕೊರೋನಾ ರೋಗ ಓಡಿಸಪ್ಪ.. ಪೊಲೀಸರಿಗೆ ಔರಾದ್ಕಾರ್ ವರದಿ ಜಾರಿಗೊಳಿಸಿ, ಸಂಬಳ ಜಾಸ್ತಿ ಮಾಡಪ್ಪ ಸೇರಿದಂತೆ ವಿವಿಧ ಬಾಳೆಹಣ್ಣಿನ ಹರಕೆಯ ಪೋಟೋಗಳು...

    ಉಡುಪಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಅಧಿಕಾರ ಸ್ವೀಕಾರ

    ಉಡುಪಿ : ಜಿಲ್ಲೆಯ ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಇಂದು ಅಧಿಕಾರ ಸ್ವೀಕರಿಸಿದರು. ಅವರು ತುಮಕೂರು ಜಿಲ್ಲೆಯ ಕುಟುಂಬ ನ್ಯಾಯಾಲಯದ ಪ್ರಧಾನ...

    ಭಾರತೀಯ ಆಶಾ ಕಾರ್ಯಕರ್ತೆಯರಿಗೆ ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ

    ವಿಶ್ವಸಂಸ್ಥೆ- ಮಹಾಮಾರಿ ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಅವಿರತ ಶ್ರಮಿಸಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ ತಲುಪುವಂತೆ ಮಾಡಿದ ಭಾರತದ ಒಂದು ಮಿಲಿಯನ್ (10 ಲಕ್ಷ) ಆಶಾ ಕಾರ್ಯಕರ್ತೆಯರನ್ನು ವಿಶ್ವ...

    ಉಡುಪಿ: ಆಸ್ತಿಗಾಗಿ ಗಂಡನ ಕೊಲೆಗೆ ಯತ್ನಿಸಿದ ಹೆಂಡತಿ : ಕುಕೃತ್ಯಕ್ಕೆ ಮಗ, ಗೆಳೆಯನ ಸಾಥ್!

    ಉಡುಪಿ: ಆಸ್ತಿಗಾಗಿ ಮಹಿಳೆಯೊಬ್ಬಳು ಮಗ ಹಾಗೂ ಗೆಳೆಯನೊಂದಿಗೆ ಸೇರಿಕೊಂಡು ಪತಿಯ ಹತ್ಯೆ ನಡೆಸಲು ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆ ಹೆಬ್ರಿಯ ಮುದ್ರಾಡಿ ಗ್ರಾಮದ ಸುಬ್ಬಣ್ಣ ಕಟ್ಟೆ ಎಂಬಲ್ಲಿ ನಡೆದಿದೆ. ಜಯಾನಂದ...

    ಆತ್ರಾಡಿ ತಾಯಿ ಮಗು ಕೊಲೆ ಪ್ರಕರಣ: ಘಟನೆ ನಡೆದ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ ಪೊಲೀಸರು

    ಉಡುಪಿ: ತಾಯಿ ಮಗಳನ್ನು ಕೊಲೆಗೈದ ಪ್ರಕರಣ ಸಂಬಂಧಪಟ್ಟಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಚೆಲುವಿಯ ದೂರದ ಸಂಬಂಧಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಹರೀಶ್ ಆರ್. ಯಾನೆ ಗಣೇಶ (29) ಬಂಧಿತ ಆರೋಪಿ. ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಆತ್ರಾಡಿ ಗ್ರಾಮದ ಮದಗ ಮುಳ್ಳಗುಜ್ಜೆ ಎಂಬಲ್ಲಿ ಮೇ 8ರಂದು ರಾತ್ರಿ ವೇಳೆ ತಾಯಿ ಮಗಳ ಜೋಡಿ ಕೊಲೆ ನಡೆದಿತ್ತು. ಪ್ರಕರಣವನ್ನು ಭೇದಿಸಿದ ಪೊಲೀಸರು ಆರೋಪಿಯನ್ನು 48 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಹರೀಶ್, ಮೃತ ಚೆಲುವಿಯ ದೂರದ ಸಂಬಂಧಿಯಾಗಿದ್ದು, ಈತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಗಂಡನಿಂದ ದೂರವಾಗಿರುವ ಅವಕಾಶವನ್ನು ಉಪಯೋಗಿಸಿಕೊಂಡು ಚೆಲುವಿಯ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ಚೆಲುವಿಯನ್ನು ಮದುವೆ ಆಗುವಂತೆ ಆರೋಪಿ ಒತ್ತಾಯಿಸುತ್ತಿದ್ದನು. ಆದರೆ, ಚೆಲುವಿಯು ಬೇರೆ ಗಂಡಸರೊಂದಿಗೆ ಫೋನಿನಲ್ಲಿ ಮಾತನಾಡುತ್ತಿರುವ ಬಗ್ಗೆ ಸಂಶಯದಿಂದ ದ್ವೇಷಗೊಂಡಿದ್ದ ಆರೋಪಿ ಹರೀಶ್. ಮೇ 8ರಂದು ಕೂಡಾ ರಾತ್ರಿ ಚೆಲುವಿಯ ಮನೆಗೆ ಬಂದಿದ್ದ ಆರೋಪಿ. ಆ ದಿನ ಚೆಲುವಿಯ ಮನೆಯಲ್ಲಿ ಊಟ ಮಾಡಿ ಮಗಳು ಮಲಗಿದ ಬಳಿಕ ಚೆಲುವಿ ಬೇರೆಯವರೊಂದಿಗೆ ಫೋನ್ ನಲ್ಲಿ ಸಂಪರ್ಕದಲ್ಲಿರುವ ವಿಚಾರದಲ್ಲಿ ತಗಾದೆ ತೆಗೆದು ಗಲಾಟೆ ಮಾಡಿದ್ದನು. ಆ ಬಳಿಕ, ಚೆಲುವಿ ಮಲಗಿದ್ದ ವೇಳೆ ಚೆಲುವಿಯನ್ನು ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ನಂತರ ನಿದ್ರೆಯಲ್ಲಿದ್ದ ಮಗಳು ತನ್ನ ವಿರುದ್ಧ ಸಾಕ್ಷಿ ಹೇಳಬಹುದೆಂದು ಅವಳನ್ನು ಕೂಡಾ ಶಾಲಿನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದನು ಎಂದು ತನಿಖೆಯಿಂದ ತಿಳಿದುಬಂದಿದೆ. ಕೊಲೆ ಮಾಡಿದ ನಂತರ ಚೆಲುವಿಯ ಕುತ್ತಿಗೆಯಲ್ಲಿದ್ದ ಸುಮಾರು 50 ಸಾವಿರ ರೂ. ಮೌಲ್ಯದ ಚಿನ್ನದ ಸರ ಹಾಗೂ ಮೃತಳು ಉಪಯೋಗಿಸುತ್ತಿದ್ದ ಮೊಬೈಲ್ ಪೋನ್ ಅನ್ನು ಹರೀಶ್ ಸುಲಿಗೆ ಮಾಡಿಕೊಂಡು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.ಇನ್ನು, ಪ್ರಕರಣದ ತನಿಖಾಧಿಕಾರಿ ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಹಿರಿಯಡ್ಕ ಎಸ್ಸೈ ಅನಿಲ್ ಬಿ.ಮಾದರ, ಕೋಟ ಎಸ್ಸೈ ಮಧು ಬಿ.ಇ. ಪ್ರೊಬೆಷನರಿ ಎಸ್ಸೈಗಳಾದ ಮಂಜುನಾಥ, ರವಿ ಬಿ.ಕಾರಗಿ ಸಿಬ್ಬಂದಿ ರಾಘವೇಂದ್ರ ಮತ್ತು ನಿತಿನ್ ಅವರ ವಿಶೇಷ ತಂಡವು ಪ್ರಕರಣ ದಾಖಲಾಗಿ 48 ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದೆ. ಪ್ರಕರಣವನ್ನು ಅತೀ ಶೀಘ್ರವಾಗಿ ಪತ್ತೆಹಚ್ಚಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ತಂಡವನ್ನು ಅಭಿನಂದಿಸಿದ್ದಾರೆ.

    Latest Posts

    ಭಾರಿ ವೈರಲ್‌ ಆಗುತ್ತಿದೆ ಈ ಬಾಳೆಹಣ್ಣಿನ ಮೇಲಿರುವ ಬರಹ ; ಏನೆಂದು ಬರೆಯಲಾಗಿದೆ ಗೊತ್ತಾ?

    ತುಮಕೂರು: ಈ ಹಿಂದೆ ಹಲವು ಬಾರಿ ರಥೋತ್ಸವದ ಸಂದರ್ಭದಲ್ಲಿ, ಕೊರೋನಾ ರೋಗ ಓಡಿಸಪ್ಪ.. ಪೊಲೀಸರಿಗೆ ಔರಾದ್ಕಾರ್ ವರದಿ ಜಾರಿಗೊಳಿಸಿ, ಸಂಬಳ ಜಾಸ್ತಿ ಮಾಡಪ್ಪ ಸೇರಿದಂತೆ ವಿವಿಧ ಬಾಳೆಹಣ್ಣಿನ ಹರಕೆಯ ಪೋಟೋಗಳು...

    ಉಡುಪಿ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಅಧಿಕಾರ ಸ್ವೀಕಾರ

    ಉಡುಪಿ : ಜಿಲ್ಲೆಯ ನೂತನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಶಾಂತವೀರ್ ಶಿವಪ್ಪ ಇಂದು ಅಧಿಕಾರ ಸ್ವೀಕರಿಸಿದರು. ಅವರು ತುಮಕೂರು ಜಿಲ್ಲೆಯ ಕುಟುಂಬ ನ್ಯಾಯಾಲಯದ ಪ್ರಧಾನ...

    ಭಾರತೀಯ ಆಶಾ ಕಾರ್ಯಕರ್ತೆಯರಿಗೆ ಜಾಗತಿಕ ಆರೋಗ್ಯ ನಾಯಕರ ಪ್ರಶಸ್ತಿ

    ವಿಶ್ವಸಂಸ್ಥೆ- ಮಹಾಮಾರಿ ಕೋವಿಡ್-19 ಸೋಂಕನ್ನು ನಿಯಂತ್ರಿಸಲು ಅವಿರತ ಶ್ರಮಿಸಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಸೌಲಭ್ಯ ತಲುಪುವಂತೆ ಮಾಡಿದ ಭಾರತದ ಒಂದು ಮಿಲಿಯನ್ (10 ಲಕ್ಷ) ಆಶಾ ಕಾರ್ಯಕರ್ತೆಯರನ್ನು ವಿಶ್ವ...

    ಉಡುಪಿ: ಆಸ್ತಿಗಾಗಿ ಗಂಡನ ಕೊಲೆಗೆ ಯತ್ನಿಸಿದ ಹೆಂಡತಿ : ಕುಕೃತ್ಯಕ್ಕೆ ಮಗ, ಗೆಳೆಯನ ಸಾಥ್!

    ಉಡುಪಿ: ಆಸ್ತಿಗಾಗಿ ಮಹಿಳೆಯೊಬ್ಬಳು ಮಗ ಹಾಗೂ ಗೆಳೆಯನೊಂದಿಗೆ ಸೇರಿಕೊಂಡು ಪತಿಯ ಹತ್ಯೆ ನಡೆಸಲು ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆ ಹೆಬ್ರಿಯ ಮುದ್ರಾಡಿ ಗ್ರಾಮದ ಸುಬ್ಬಣ್ಣ ಕಟ್ಟೆ ಎಂಬಲ್ಲಿ ನಡೆದಿದೆ. ಜಯಾನಂದ...

    Don't Miss

    ಮಂಗಳೂರು: ಬಿ. ಕೆ. ಹರಿಪ್ರಸಾದ್ ಮತ್ತು ಯು. ಟಿ. ಖಾದರ್‌ರಿಗೆ ಅಭಿನಂದನಾ ಸಮಾರಂಭ

    ಮಂಗಳೂರು: ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಬಿ. ಕೆ. ಹರಿಪ್ರಸಾದ್ ಮತ್ತು ಕರ್ನಾಟಕ ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕರಾಗಿ ಆಯ್ಕೆಯಾಗಿರುವ ಮಾಜೀ ಮಂತ್ರಿ...

    ಮಲ್ಪೆ: ಚಲಿಸುತ್ತಿದ್ದ ಸ್ಕೂಟರ್ ನಲ್ಲೇ ಹೃದಯಾಘಾತ – ಸಾವು

    ಮಲ್ಪೆ: ಮೀನುಗಾರಿಕೆ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ತೆರಳುತ್ತಿದ್ದ ಸಂದರ್ಭ ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಲ್ಪೆ ಕಂಬಳತೋಟ ಎಂಬಲ್ಲಿ ಮೇ.18ರಂದು ನಡೆದಿದೆ.

    ಉಡುಪಿ ಜಿಲ್ಲೆಯಲ್ಲಿ ಡೆಂಗ್ಯೂ ಹೆಚ್ಚಳ – ಜಡ್ಕಲ್, ಮುದೂರಲ್ಲಿ ಶಾಲೆಗೆ 10 ದಿನ ರಜೆ

    ಉಡುಪಿ: 136 ಡೆಂಗ್ಯೂ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದು, ಬೈಂದೂರು ತಾಲೂಕು ವ್ಯಾಪ್ತಿಯ ಜಡ್ಕಲ್ ಮುದೂರು ಗ್ರಾಮದಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲೆಗೆ 10 ದಿನ ರಜೆ ಘೋಷಿಸಲಾಗಿದೆ ಎಂದು ತಿಳಿದು ಬಂದಿದೆ. ಜಡ್ಕಲ್...

    ಪೋಷಕರಿಂದ ಪ್ರತ್ಯೇಕವಾಗಿ ವಾಸಿಸಲು ಪತಿಗೆ ಒತ್ತಾಯಿಸುವುದು ಕ್ರೌರ್ಯ: ಛತ್ತೀಸ್‌ಗಢ ಹೈಕೋರ್ಟ್

    ಪೋಷಕರಿಂದ ಪ್ರತ್ಯೇಕವಾಗಿ ವಾಸಿಸಲು ಪತಿಗೆ ಒತ್ತಾಯಿಸಿದರೆ ಸುಳ್ಳು ವರದಕ್ಷಿಣೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದರೆ ಅದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಮಹತ್ವದ ತೀರ್ಪೊಂದರಲ್ಲಿ ಛತ್ತೀಸ್‌ಗಢ ಹೈಕೋರ್ಟ್ ತಿಳಿಸಿದೆ 

    11 ಕೋಟಿ ರೂ. ಸಂಪತ್ತು ದಾನ: 11 ವರ್ಷದ ಪುತ್ರ, ಪತ್ನಿ ಜೊತೆ ಸನ್ಯಾಸತ್ವ ಸ್ವೀಕರಿಸಿದ ‘ಕುಬೇರ’!

    ಜೈಪುರ: ಬಾಲಾಘಾಟ್‌ನ ಬುಲಿಯನ್ ವ್ಯಾಪಾರಿ ರಾಕೇಶ್ ಸುರಾನಾ, ಸುಮಾರು 11 ಕೋಟಿ ಮೌಲ್ಯದ ಆಸ್ತಿಯನ್ನು ಬಿಟ್ಟು, ಅವರ ಪತ್ನಿ ಮತ್ತು ಮಗನೊಂದಿಗೆ ಮೇ 22 ರಂದು ಜೈಪುರದಲ್ಲಿ ವಿಧಿವತ್ತಾಗಿ ದೀಕ್ಷೆ ಪಡೆಯಲಿದ್ದಾರೆ....