ಬಂಟ್ವಾಳ: ಖ್ಯಾರ ರಂಗಭೂಮಿ ಹಾಗೂ ಚಲನಚಿತ್ರ ನಟ ರಘುರಾಮ ಶೆಟ್ಟಿ ಬೆಳ್ತಂಗಡಿ(58) ಅವರು ಹೃದಯಾಘಾತದಿಂದ ಡಿ.2 ರಂದು( ಶುಕ್ರವಾರ) ರಾತ್ರಿ ನಿಧನ ಹೊಂದಿದರು.
ಮೃತರು, ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಶಿಸ್ತಿನ ನಟನೆಂದೇ ಖ್ಯಾತರಾಗಿದ್ದ ಅವರು ವೃತ್ತಿಪರ ರಂಗಭೂಮಿ ನಟರಾಗಿದ್ದು ಪ್ರಸ್ತುತ ನಮ್ಮ ಕಲಾವಿದೆರ್ ಬೆದ್ರ ತಂಡದ ಸದಸ್ಯರಾಗಿದ್ದರು. ಹಲವಾರು ಸಂಘ ಸಂಸ್ಥೆಗಳ ನಾಟಕಗಳಲ್ಲಿ ಯೂ ಅಭಿನಯಿಸಿದ್ದರು. ಕೋಟಿ ಚೆನ್ನಯ ತುಳು ಧಾರಾವಾಹಿ ಸಹಿತ ಹಲಾವಾರು ಧಾರಾವಾಹಿ ಗಳಲ್ಲಿ ನಟಿಸಿದ್ದರು. ದೇಯಿ ಬೈದೆತಿಮೊದಲಾದ ಚಲನಚಿತ್ರಗಳು, ಪೌರಾಣಿಕ, ಚಾರಿತ್ರಿಕ ನಾಟಕಗಳಲ್ಲಿ ನಟಿಸಿ ಪ್ರಸಿದ್ಧ ರಾಗಿದ್ದರು. ಅವರ ನಿಧನಕ್ಕೆ ರಂಗಭೂಮಿ ಯ ಹಲವಾರು ಗಣ್ಯರ ಸಹಿತ ಅಭಿಮಾನಿಗಳು, ಮಿತ್ರರು ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಬೆಳ್ತಂಗಡಿ, ಲಾಯಿಲ ಅವರ ನಿವಾಸದಲ್ಲಿ ಮಧ್ಯಾಹ್ನ 11 ಗಂಟೆಗೆ ನಡೆಯಲಿದೆ.
