ಶಾರದಾ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಶಾರದಾ ಆಯುರ್ಧಾಮ ಕ್ಯಾಂಪಸ್ ನಲ್ಲಿ ಇಂದು(ಅ.13) ಹಮ್ಮಿಕೊಳ್ಳಲಾಗಿತ್ತು.
ಚಿತ್ರಕಲಾ ಸ್ಪರ್ಧೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು 350ಕ್ಕೂ ಹೆಚ್ಚು ಸ್ಪರ್ಧಿಗಳು ಅತಿ ಉತ್ಸಾಹದಿಂದ ವರ್ಣಯುರ್ವೇದದಲ್ಲಿ ಪಾಲ್ಗೊಂಡರು.


ಸ್ಪರ್ಧೆಯು 9.00 ಗಂಟೆಗೆ ನೋಂದಣಿಯೊಂದಿಗೆ ಮೊದಲ್ಗೊಂಡು ಲಘು ಉಪಹಾರದೊಂದಿಗೆ ಮುಂದುವರಿಯಿತು. ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ಎಂ.ಬಿ.ಪುರಾಣಿಕ್ ಮಕ್ಕಳನ್ನು ಉದ್ದೇಶಿಸಿ
ಮಾತನಾಡಿ ಶುಭ ಹಾರೈಸಿದರು.



ಕಾಲೇಜಿನ ಪ್ರಾಂಶುಪಾಲರಾದ ಡಾ .ರವಿಗಣೇಶ ಮೊಗ್ರ, ಮುಖ್ಯ ಆಯೋಜಕರಾದ ಡಾ. ಸಂದೀಪ್ ಬೇಕಲ್ ,
ಪೋಷಕರು ಮತ್ತು ಕಾರ್ಯಕ್ರಮದ ಕಾಲೇಜು ಆಸ್ಪತ್ರೆಯ ಸಿಬ್ಬಂದಿ, ಸ್ಪರ್ದಿಗಳು ಪಾಲ್ಗೊಂಡರು. ಈ ಸಂಧರ್ಭದಲ್ಲಿ
ವಿವರಗಳನ್ನು ಡಾ.ಸಂದೀಪ್ ಬೇಕಲ್.ಆರ್ ನೀಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ವತಿಯಿಂದ ಪೋಷಕರಿಗಾಗಿ ಮಕ್ಕಳಲ್ಲಿ ಒತ್ತಡ ನಿರ್ವಹಣೆ ಅರಿವು ಮೂಡಿಸುವ ಅಥಿತಿ ಉಪನ್ಯಾಸ, ಪ್ರಕೃತಿ ಪರೀಕ್ಷೆ ಪಥ್ಯಾಹಾರದ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ,ರತ್ನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.


ಕಾಲೇಜಿನ ವಿದ್ಯಾರ್ಥಿಗಳು ಸಿದ್ಧಪಡಿಸಿದ ಸೆಲ್ಪೀ ಕೌಂಟರ್ ಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತ. ಚಿತ್ರಕಲಾ ಸ್ಪರ್ಧೆಯು ಸುಮಾರು 10.00 ಗಂಟೆಗೆ ಪ್ರಾರಂಭಗೊಂಡು 12.00 ಕ್ಕೆ ಸಮಾರೋಪಗೊಂಡಿತು. ಪಾಲ್ಗೊಂಡ ಎಲ್ಲಾ
ವಿದ್ಯಾರ್ಥಿಗಳಿಗ ಪ್ರಮಾಣ ಪತ್ರ ಹಾಗೂ ಲಘು ಉಡುಗೊರೆ ನೀಡಲಾಯಿತು.


