ಮೈಸೂರು : ಶಕ್ತಿಧಾಮ ವಿದ್ಯಾಶಾಲೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದು, ಈ ಮೂಲಕ ನಟ ಪುನೀತ್ ರಾಜ್ಕುಮಾರ್ ಅವ್ರ ಕನಸನ್ನ ಕುಟುಂಬಸ್ಥರು ನನಸು ಮಾಡಿದ್ದಾರೆ.
ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಶಕ್ತಿಧಾಮದ ಬಳಿ ಶಾಲೆ ಆರಂಭಿಸುವ ಕನಸನ್ನ ನಟ ಪುನೀತ್ ರಾಜ್ಕುಮಾರ್ ಕಂಡಿದ್ದರು.
ಅದ್ರಂತೆ, ಸಧ್ಯ ಅಪ್ಪು ಕನಸನ್ನ ಪುನೀತ್ ಕುಟುಂಬಸ್ಥರು ನನಸು ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವ್ರನ್ನ ನಟ ಶಿವರಾಜ್ಕುಮಾರ್ ಹಾಡಿ ಹೊಗಳಿದ್ದು,’ ಸಿಎಂ ಅಂದರೆ ತುಂಬಾ ದೊಡ್ಡವರು ಅಂದುಕೊಂಡಿದ್ದೆ. ಆದ್ರೆ, ಬೊಮ್ಮಾಯಿ ಕಾಮಾನ್ ಮ್ಯಾನ್. ಯಾವಾಗ್ಲೂ ಮಕ್ಕಳಂತೆ ಇರ್ತಾರೆ. ಬೊಮ್ಮಾಯಿರಿಗೆ ನಮ್ಮ ಕುಟುಂಬದ ಮೇಲೆ ಪ್ರೀತಿ ಇದೆ. ಡ್ರಾಮಾ ಮಾಡಲು ಆಗಲ್ಲ, ಅವರದ್ದು ಸತ್ಯವಾದ ಪ್ರೀತಿ’ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಸಚಿವ ಎಸ್.ಟಿ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ನಟ ಶಿವರಾಜ್ಕುಮಾರ್, ಪತ್ನಿ ಗೀತಾ, ಪುತ್ರಿ ಉಪಸ್ಥಿತರಿದ್ದರು.