ಅಂಜೂರ ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.
ಒಣಗಿದ ಅಂಜೂರದ ಹಣ್ಣುಗಳು ರುಚಿಯಲ್ಲಿ ತುಂಬಾ ಸಿಹಿಯಾಗಿರುತ್ತವೆ. ಮಲ್ಬೆರಿ ಕುಟುಂಬದ ಭಾಗವೆಂದು ಪರಿಗಣಿಸಲಾದ ಫಿಕಸ್ ಮರದ ಹೆಸರಿನ ಮರದ ಮೇಲೆ ಅಂಜೂರದ ಹಣ್ಣುಗಳು ಬೆಳೆಯುತ್ತವೆ.
ರಕ್ತದೊತ್ತಡ ನಿಯಂತ್ರಣ : ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣನ್ನು ಸೇವಿಸುವುದರಿಂದ ರಕ್ತದೊತ್ತಡದ ಸಮಸ್ಯೆಗಳು ಬರುವುದಿಲ್ಲ. ರಕ್ತದೊತ್ತಡ ನಿಯಂತ್ರಿಸಲು ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಕಂಡುಬರುವ ಪೊಟ್ಯಾಸಿಯಮ್ ಮತ್ತು ಎಂಟಿ ಒಕ್ಸಿಡೆಂಟ್‌ಗಳು ದೇಹದಲ್ಲಿನ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹೃದಯದ ಆರೋಗ್ಯಕ್ಕೆ ಕೂಡ ಅಂಜೂರದ ಹಣ್ಣು ಒಳ್ಳೆಯದು. ಆದ್ದರಿಂದ ವೈದ್ಯರು ಅಂಜೂರದ ಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ.
ಜೀರ್ಣಕ್ರಿಯೆ ಸುಧಾರಣೆ : ಅಂಜೂರದ ಹಣ್ಣುಗಳನ್ನು ಸೇವಿಸುವುದು ಹೊಟ್ಟೆಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಉತ್ತಮ ಪ್ರಮಾಣದ ಫೈಬರ್ ಕಂಡುಬರುತ್ತದೆ. ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಅಂಜೂರದ ಹಣ್ಣಿನಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಒಳ್ಳೆಯದು. ಅಸಿಡಿಟಿ, ಅಜೀರ್ಣ, ಗ್ಯಾಸ್ ಇತ್ಯಾದಿಗಳನ್ನು ನಿವಾರಿಸುತ್ತದೆ.
ದೇಹಕ್ಕೆ ಶಕ್ತಿ ಪೂರೈಕೆ : ಖಾಲಿ ಹೊಟ್ಟೆಯಲ್ಲಿ ಅಂಜೂರದ ಹಣ್ಣನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಇದರಲ್ಲಿರುವ ಅನೇಕ ರೀತಿಯ ಪೋಷಕಾಂಶಗಳು ದೇಹಕ್ಕೆ ಬಲ ನೀಡುತ್ತವೆ. ವಿಶೇಷವಾಗಿ ದೇಹಕ್ಕೆ ಶಕ್ತಿ ಒದಗಿಸುವ ಕಾರ್ಬೋಹೈಡ್ರೇಟ್‌ಗಳು ಅಂಜೂರದಲ್ಲಿವೆ. ಅಂಜೂರದ ಹಣ್ಣುಗಳೊಂದಿಗೆ ಹಾಲು ಸೇವಿಸುವುದು ಉತ್ತಮ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಂಜೂರ ಮತ್ತು ಹಾಲು ಸೇವನೆ ಮಾಡಿದ್ರೆ ದಿನವಿಡೀ ಎನರ್ಜೆಟಿಕ್ ಆಗಿ ಇರಬಹುದು.