Tuesday, September 17, 2024
spot_img
More

    Latest Posts

    ಐತಿಹಾಸಿಕ ಕೋಟೆಕಣಿಯಲ್ಲಿ ಹಳೆ ಕಾಲದ ಕಲ್ಲಿನ ಸಾವಿರಾರು ಪಿರಂಗಿ ಗುಂಡುಗಳು ಪತ್ತೆ

    ಕಾರ್ಕಳ: ಐತಿಹಾಸಿಕ ಹಿನ್ನಲೆಯುಳ್ಳ ಕಾರ್ಕಳ ಸರಕಾರಿ ಆಸ್ಪತ್ರೆ ಬಳಿಯ ಕೋಟೆಕಣಿ ಪರಿಸರದಲ್ಲಿ ಶನಿವಾರ ಕಟ್ಟಡ ನಿರ್ಮಾಣ ಕಾಮಗಾರಿಗೆಂದು ಹಿಟಾಚಿಯಲ್ಲಿ ಮಣ್ಣು ಅಗೆಯುತ್ತಿದ್ದಾಗ ಫಿರಂಗಿ ಮಾದರಿಯ ಕಲ್ಲುಗುಂಡುಗಳು ಪತ್ತೆಯಾಗಿವೆ. ಉದ್ಯಮಿಯೊಬ್ಬರು ಖರೀದಿಸಿದ್ದ ಈ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಭೂಮಿಯನ್ನು ಅಗೆಯುತ್ತಿದ್ದಾಗ ಸುಮಾರು 15 ಅಡಿ ಆಳದಲ್ಲಿ ವೃತ್ತಾಕಾರದ ನೂರಾರು ಕಲ್ಲು ಗುಂಡುಗಳು ಪತ್ತೆಯಾಗಿವೆ.

    ಸ್ಥಳಕ್ಕೆ ಕಾರ್ಕಳ ಪ್ರಭಾರ ತಹಶೀಲ್ದಾರ್ ಪುರಂದರ ಎಸ್ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉತ್ಖನನದಿಂದ ಸಿಕ್ಕಿರುವ ಕಲ್ಲು ಗುಂಡುಗಳನ್ನು ಪುರಾತತ್ವ ಇಲಾಖೆಗೆ ಒಪ್ಪಿಸಲಾಗಿದೆ.

    ಇತಿಹಾಸಕಾರರ ಪ್ರಕಾರ ಕಳೆದಿಯ ಶಿವಪ್ಪ ನಾಯಕನ ಆಳ್ವಿಕೆಯಲ್ಲಿ ಇಲ್ಲಿ ಕೋಟೆ ನಿರ್ಮಿಸಲಾಗಿತ್ತು.ಬಳಿಕ ಟಿಪ್ಪು ಶಿವಪ್ಪ ನಾಯಕನ ಕೋಟೆಗೆ ದಾಳಿ ನಡೆಸಿದ್ದ ಎನ್ನುವುದು ಇತಿಹಾಸಕಾರರ ಅಭಿಪ್ರಾಯವಾಗಿದೆ. ವೈರಿಗಳ ವಿರುದ್ಧ ಫಿರಂಗಿ ದಾಳಿಗೆ ಈ ಕಲ್ಲು ಗುಂಡುಗಳನ್ನು ಬಳಸಿಕೊಂಡಿರುವ ಸಾಧ್ಯತೆಯಿದೆ ಎಂಬುವುದಾಗಿ ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ವೈರಿಗಳಿಂದ ರಕ್ಷಿಸಿಕೊಳ್ಳಲು ಕೋಟೆಯ ಸುತ್ತಲೂ ಕಂದಕ ನಿರ್ಮಿಸಿದ್ದರಿಂದ ಈ ಸ್ಥಳಕ್ಕೆ ಕೋಟೆಕಣಿ ಎಂದೇ ಹೆಸರು ಬಂದಿತ್ತು ಅಲ್ಲದೇ ಇದೇ ಹೆಸರು ಇಂದಿಗೂ ಚಾಲ್ತಿಯಲ್ಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss