ಸಜಿಪನಡು: ಸಾರ್ವಜನಿಕ ಹಿಂದೂ ರುದ್ರಭೂಮಿ (ದೇವಭೂಮಿ) ಸಮಿತಿ (ರಿ.) ಕಂಚಿನಡ್ಕಪದವು, ಸಜಿಪನಡು ಗ್ರಾಮದ ಆಸುಪಾಸಿನ 7 ಗ್ರಾಮಗಳ (ಸಜಿಪನಡು, ಸಜಿಪಪಡು, ಸಜಿಪಮೂಡ, ಸಜಿಪಮುನ್ನೂರು, ಮಂಚಿ, ಇರಾ, ಚೇಳೂರು) ಜನರ ಬಹುದಿನಗಳ ಬೇಡಿಕೆಯಾದ ಆಧುನಿಕ ಚಿಕಿತ್ಸಾ ಸೌಲಭ್ಯ ಹೊಂದಿರುವ ಆಂಬ್ಯುಲೆನ್ಸ್ ವಾಹನದ ಲೋಕರ್ಪಣೆ ಕಾರ್ಯವು ದಿನಾಂಕ 04-10-2022 ಮಂಗಳವಾರ ನವರಾತ್ರಿಯ ವಿಶೇಷ ದಿನವಾದ ಆಯುಧ ಪೂಜೆ ಯಂದು ವಿಶೇಷ ಆಹ್ವಾನಿತರ ಹಾಗೂ ಊರ ಗಣ್ಯರ ಉಪಸ್ಥಿತಿಯಲ್ಲಿ ವಾಹನ ಪೂಜೆ ಯೊಂದಿಗೆ ಸಜಿಪನಡು ಗ್ರಾಮದ ದೇರಾಜೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಸತೀಶ್ ಕುಂಪಲ, ಬಂಟ್ವಾಳ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಯಶವಂತ್ ದೇರಾಜೆ, ಇರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಸುರೇಶ್ ದೇರಾಜೆ, ಸಜಿಪಪಡು ಹಾಗೂ ಚೇಳೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಠಲ ಅಮೀನ್, ಸುರೇಶ್ ಸಜಿಪ, ಭಾಸ್ಕರ್ ಸಜಿಪ, ಪಂಚಾಯತ್ ಸದಸ್ಯರಾದ ಹೇಮಂತ್ ಪೂಜಾರಿ, ಭಾಸ್ಕರ್ ನಾಯ್ಕ್, ಹಾಲು ಉತ್ಪಾದಕರ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಹರೀಶ್ ಬಂಗೇರಾ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
