ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ವತಿಯಿಂದ ಅಂಬಾಸಿಡರ್ ಕಾರು ಮಾಲಕ-ಚಾಲಕರಿಗೆ
ಸಾರ್ವಜನಿಕ ಸನ್ಮಾನ ದಿನಾಂಕ 25- 9- ’22ರ ಆದಿತ್ಯವಾರ ಸ್ಥಾಪಕಾಧ್ಯಕ್ಷರೂ, ಮಾಜಿ ಜಿ. ಪಂ ಉಪಾಧ್ಯಕ್ಷರಾದ
ಯಂ. ತುಂಗಪ್ಪ ಬಂಗೇರರ ನೇತೃತ್ವದಲ್ಲಿ ಅಂಬಾಸಿಡರ್ ಕಾರು ಮಾಲಕ- ಚಾಲಕರಾಗಿ , ಚಾರ್ಮಾಡಿ- ನೆರಿಯ- ಉಜಿರೆ- ಬೆಳ್ತಂಗಡಿ- ಪುಂಜಾಲಕಟ್ಟೆ – ಬಿ.ಸಿ. ರೋಡು -ಮಂಗಳೂರು ಮಾರ್ಗದಲ್ಲಿ ಕಳೆದ 35 ವರ್ಷಗಳಿಂದ , ಪ್ರಯಾಣಿಕರಿಗೆ ಸುಖ ಪ್ರಯಾಣದ ಸೇವೆ ನೀಡಿದ ಶ್ಯಾಮರಾಯ ನಾಯಕ್ ಕಾವಳಕಟ್ಟೆ, ಇಬ್ರಾಹಿಂ ದೂಮಳಿಕೆ-ಕಾವಳಕಟ್ಟೆ, ಮನೋಹರದಾಸ್ ಭಟ್ ಉಜಿರೆ, ವಸಂತ ಗೌಡ ಎನ್. ಕೆ. ಚಾರ್ಮಾಡಿ, – ಇವರನ್ನು
ಶ್ರದ್ಧೆ, ಪ್ರಾಮಾಣಿಕ ಸತ್ಕಾರ್ಯವನ್ನು ಗುರುತಿಸಿ ಸಾರ್ವಜನಿಕವಾಗಿ ಸನ್ಮಾನಿಸಲಾಯಿತು.
ಪುಂಜಾಲಕಟ್ಟೆ ಪೊಲಿಸ್ ಠಾಣಾಧಿಕಾರಿಗಳಾದ ಸುತೇಶ್ ಸನ್ಮಾನಿಸಿದರು, ಪ್ರಾಮಾಣಿಕವಾದ ಸಾರ್ವಜನಿಕ ಸೇವೆ ನೀಡಿ, ಪ್ರಯಾಣಿಕರಿಂದ ಸಾರ್ವಜನಿಕವಾಗಿ ಸನ್ಮಾನ ಸ್ವೀಕರಿಸಿದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ಎಲೆಮರೆಯ ಕಾಯಿಗಳಂತೆ ಏಕನಿಷ್ಠೆಯಿಂದ ಸೇವಾತತ್ಪರತೆಯಿಂದ ದುಡಿದ ಸನ್ಮಾನಿತರಿಗೆ ಯಂ. ತುಂಗಪ್ಪ ಬಂಗೇರ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ…ಗಂಗಾಧರ ಪೂಜಾರಿ ಕಜೆಕಾರು, ಸರ್ವೋತ್ತಮ ಪ್ರಭು, ಹರೀಶ್ ಪ್ರಭು, ಸತೀಶ್ ಪೂಜಾರಿ ಕಜೆಕಾರು, ಶ್ರೀನಿವಾಸ್ ಪಿ. ಅತ್ತಾಜೆ, ಗಣೇಶ್ ಮೂಲ್ಯ ಅನಿಲಡೆ, ಸೇವಾ ಸೀತಾರಾಮ ಶೆಟ್ಟಿ, ರಮೇಶ್ ಶೆಟ್ಟಿ ಮಜಲೋಡಿ, ದೇವದಾಸ್ ಅಬುರ, ಚಂದ್ರ ಪೂಜಾರಿ ಗುಂಡಿಮನ್ಯ, ನಾಗೇಶ್ ಪ್ರಭು ಹಾಗೂ ಕ್ಲಬ್ಬಿನ ಅಧ್ಯಕ್ಷರಾದ ಪ್ರಶಾಂತ್ ಪುಂಜಾಲಕಟ್ಟೆ ಗೌರವಾಧ್ಯಕ್ಷ ಅಬ್ದುಲ್ಲಾ ಪಿ. ಕಾರ್ಯದರ್ಶಿ ಜಯರಾಜ್ ಅತ್ತಾಜೆ, ರಾಜೇಶ್ ಪಿ ಪುಂಜಾಲಕಟ್ಟೆ , ಯಂ.ಮಾಧವ ಬಂಗೇರ, ಪ್ರಭಾಕರ್ ಪಿ ಯಂ ಸಂತೋಷ್ ಮೂರ್ಜೆ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.
