ಸುರತ್ಕಲ್: ಯುವತಿಯನ್ನು ರಸ್ತೆ ಮಧ್ಯೆ ಚುಡಾಯಿಸಿ ಕಿರುಕುಳನೀಡಿ, ಹಣದ ಆಮಿಷ ತೋರಿಸಿ ಅನುಚಿತವಾಗಿ ವರ್ತಿಸಿದ ಘಟನೆ ಬಗ್ಗೆ ವರದಿಯಾಗಿದೆ.
ಕೃಷ್ಣಾಪುರ 8ಎ ಬ್ಲಾಕ್ ನಲ್ಲಿ ಯುವಕ ಫರಾಜ್ ಬೈಕ್ ನಲ್ಲಿ ಬಂದು ಯುವತಿಗೆ ಚುಡಾಯಿಸಿದ್ದಾನೆಂದು ಆರೋಪಿಸಲಾಗಿದೆ.
ಭಯಭೀತಳಾಗಿ ಯುವತಿ ಕಿರುಚಿದಾಗ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು.ಸ್ಥಳೀಯರನ್ನು ಕಂಡ ಯುವಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಕುರಿತು ಯುವತಿಯ ಮನೆಯವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.