Friday, April 19, 2024
spot_img
More

    Latest Posts

    ರನ್ ವೇ ಯಿಂದ ಜಾರಿ ಅಡ್ಡಲಾಗಿ ನಿಂತ ವಿಮಾನ: ತನಿಖೆಗೆ ಆದೇಶಿಸಿದ DGCA

    ಅಲಯನ್ಸ್ ಏರ್ ವಿಮಾನ ಜಬಲ್‌ ಪುರ ವಿಮಾನ ನಿಲ್ದಾಣದಲ್ಲಿ ರನ್‌ ವೇಯಲ್ಲಿ ಅಡ್ಡಲಾಗಿ ಅತಿಕ್ರಮಿಸಿದ್ದು, ತನಿಖೆಗಾಗಿ DGCA ಆದೇಶಿಸಿದೆ.

    ಡಿಜಿಸಿಎ ಅಧಿಕಾರಿಗಳ ಪ್ರಕಾರ, ದೆಹಲಿಯಿಂದ 55 ಜನರನ್ನು ಹೊತ್ತ ಅಲಯನ್ಸ್ ಏರ್ ವಿಮಾನ ಶನಿವಾರ ಮಧ್ಯಾಹ್ನ ಜಬಲ್‌ ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವಾಗ ರನ್‌ ವೇ ಅತಿಕ್ರಮಿಸಿದೆ.

    ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿ ಗಾಯಗೊಂಡಿಲ್ಲ.

    ನಾಗರಿಕ ವಿಮಾನಯಾನ ನಿರ್ದೇಶನಾಲಯ(DGCA) ವಿಚಾರಣೆ ಪ್ರಾರಂಭಿಸಿದೆ. ದೆಹಲಿ ಮತ್ತು ಜಬಲ್ಪುರ ನಡುವೆ ಹಾರಲು ATR-72 ವಿಮಾನ ಬಳಸಲಾಗಿದೆ. ಅಲಯನ್ಸ್ ಏರ್‌ನ ATR-72 ವಿಮಾನವು ದೆಹಲಿಯಿಂದ ಬೆಳಿಗ್ಗೆ 11.30 ಕ್ಕೆ ಹೊರಟಿತು. ಮಧ್ಯಪ್ರದೇಶದ ಜಬಲ್‌ಪುರದಲ್ಲಿ 1.15 ಕ್ಕೆ ಇಳಿಯಿತು. ವಿಮಾನದಲ್ಲಿ 55 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿ ಇದ್ದರು. ಘಟನೆಯ ನಂತರ ಎಲ್ಲರೂ ಸುರಕ್ಷಿತವಾಗಿ ಹೊರಬಂದರು.

    ಜಬಲ್ಪುರದಿಂದ ಸುಮಾರು 21 ಕಿಲೋಮೀಟರ್ ದೂರದಲ್ಲಿರುವ ದುಮ್ನಾ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವಿಮಾನ ನಿಲ್ದಾಣದ ಕಾರ್ಯಚಟುವಟಿಕೆಗಳನ್ನು ನಾಲ್ಕೈದು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು ಎಂದು ವಿಮಾನ ನಿಲ್ದಾಣದ ನಿರ್ದೇಶಕಿ ಕುಸುಮ್ ದಾಸ್ ತಿಳಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss