Friday, March 29, 2024
spot_img
More

    Latest Posts

    ಮೊದಲಬಾರಿಗೆ ಇತಿಹಾಸದಲ್ಲಿಯೇ ಅಂಟಾರ್ಟಿಕಾದಲ್ಲಿ ಏರ್ಬಸ್ ವಿಮಾನ

    ಅಂಟಾರ್ಟಿಕಾ: ಇತಿಹಾಸದಲ್ಲಿಯೇ ಮೊದಲಬಾರಿಗೆ ಏರ್ಬಸ್ ಎ340 ಹಿಮಾವೃತಗೊಂಡ ಅಂಟಾರ್ಟಿಕಾದಲ್ಲಿ ಲ್ಯಾಂಡ್ ಆಗಿದೆ.

    ನಾವು ವಿಮಾನವನ್ನು ಎಲ್ಲ ಕಡೆ ಹಾರಾಡುವುದನ್ನು ನೋಡಿದ್ದೇವೆ. ಎಂದೂ ವಿಮಾನ ಹಿಮಾವೃತಗೊಂಡ ಪ್ರದೇಶದಲ್ಲಿ ಲ್ಯಾಂಡ್ ಆಗಿರುವುದನ್ನು ನೋಡಿರಲಿಲ್ಲ. ಆದರೆ ಈಗ ಇತಂಹ ಅದ್ಭುತ ಸಾಹಸವನ್ನು ಹಾಯ್ ಫ್ಲೈ ಮಾಡಿದೆ. ಹಾಯ್ ಫ್ಲೈ ನ ಉಪಾಧ್ಯಕ್ಷ ಕ್ಯಾಪ್ಟನ್ ಕಾರ್ಲೋಸ್ ಮಿರ್ಪುರಿ ಅವರ ತಂಡ ಏರ್ಬಸ್ ಎ340 ನೊಂದಿಗೆ ನವೆಂಬರ್ 2 ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್‍ನಿಂದ ಹೊರಟು ಅಂಟಾರ್ಟಿಕಾದ ವುಲ್ಫ್ಸ್ ಫಾಂಗ್ ರನ್ ವೇ ಎಂದು ಕರೆಯಲ್ಪಡುವ ನೀಲಿ ಗ್ಲೇಶಿಯಲ್ ಲ್ಯಾಂಡಿಂಗ್ ಸ್ಟ್ರಿಪ್‍ನಲ್ಲಿ ಲ್ಯಾಂಡ್ ಆಗಿದೆ.

    ಇಲ್ಲಿರುವ ವಿಶೇಷ ಸಂಗತಿ ಎಂದರೆ, ಅಂಟಾರ್ಟಿಕಾದಲ್ಲಿನ ಸಾಹಸ ಶಿಬಿರವಾದ ವುಲ್ಫ್ಸ್ ಫಾಂಗ್ ಈ ಐತಿಹಾಸಿಕ ಕಾರ್ಯಾಚರಣೆಯನ್ನು ನಿರ್ವಹಿಸಲು ಹೈ ಫ್ಲೈ ಅನ್ನು ನೇಮಿಸಿಕೊಂಡಿದೆ. ಈ ಎ340 ಏರ್ಬಸ್ ಒಟ್ಟು 4630 ಕಿಲೋಮೀಟರ್ ಪ್ರಯಾಣಿಸಿತು. ತಾಂತ್ರಿಕವಾಗಿ ವಿಮಾನ ನಿಲ್ದಾಣವಾಗದಿದ್ದರೂ, ಸಿ-ಲೆವೆಲ್ ವಿಮಾನ ನಿಲ್ದಾಣವಾಗಿ ಗೊತ್ತುಪಡಿಸಲಾದ ವುಲ್ಫ್ಸ್ ಫಾಂಗ್ ಆಸ್ತಿಯಲ್ಲಿನ ನೀಲಿ-ಐಸ್ ರನ್‍ವೇಯಲ್ಲಿ ಏರ್ಬಸ್ ಅನ್ನು ಇಳಿಸಲಾಯಿತು.

    ಪೈಲಟ್ ಕಾರ್ಲೋಸ್ ಮಿರ್ಪುರಿ ಈ ಕುರಿತು, ವಿಮಾನವು ಸುಗಮವಾಗಿ ಸಾಗಿತ್ತು. ಆದರೆ ಲ್ಯಾಂಡ್ ಮಾಡಬೇಕಾದ ವೇಳೆ ರನ್‍ವೇಯನ್ನು ಗುರುತಿಸುವುದು ಸುಲಭವಾಗಿರಲಿಲ್ಲ ಎಂದು ಬರೆದುಕೊಂಡಿದ್ದಾರೆ.

    ಈ ಐತಿಹಾಸಿಕ ವಿಮಾನವು ಅಂಟಾರ್ಟಿಕಾಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಬೇಕು ಎಂದು ಇಷ್ಟಪಡುವ ಪ್ರಯಾಣಿಕರ ಆಸೆಯನ್ನು ನೆರವೇರಿಸುತ್ತೆ. ಆದರೆ ಅಂಟಾರ್ಟಿಕಾದಲ್ಲಿ ಯಾವುದೇ ಅಧಿಕೃತ ವಿಮಾನ ನಿಲ್ದಾಣವಿಲ್ಲದಿದ್ದರೂ 50 ಲ್ಯಾಂಡಿಂಗ್ ಸ್ಟ್ರಿಪ್‍ಗಳು ಮತ್ತು ರನ್‍ವೇಗಳಿವೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss