ಉಡುಪಿ: ಕೋಟದ ಶ್ರೀ ಅಘೋರೇಶ್ವರ ಕಲಾರಂಗ ವತಿಯಿಂದ ಕೊಡಲ್ಪಡುವ ಶ್ರೀ ಅಘೋರೇಶ್ವರ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ ಕಟಪಾಡಿಯ ಸಮಾಜಸೇವಕ ರವಿ ಕಟಪಾಡಿ ಆಯ್ಕೆಯಾಗಿದ್ದಾರೆ. ರವಿ ಕಟಪಾಡಿ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದು, ವೇಷಧಾರಣೆಯ ಮೂಲಕ ಗಳಿಸಿದ ಹಣವನ್ನು ಬಡ ಅನಾರೋಗ್ಯಪೀಡಿತ ಬಡಮಕ್ಕಳ ಚಿಕಿತ್ಸೆಗೆ ಸಹಾಯಹಸ್ತ ಚಾಚುತ್ತಿದ್ದಾರೆ.
ಈ ಬಾರಿಯ ಕನ್ನಡ ರಾಜ್ಯೋತ್ಸವ ಆಚರಣೆ ನ.12ರಂದು ಶ್ರೀ ಅಘೋರೇಶ್ವರ ಸಭಾಭವನದಲ್ಲಿ ನಡೆಯಲಿದ್ದು, ಅದೇ ದಿನ ಪ್ರಶಸ್ತಿ ವಿತರಿಸಲಾಗುವುದು ಎಂದು ಕಲಾರಂಗದ ಆಡಳಿತ ಮಂಡಳಿ ತಿಳಿಸಿದೆ.ಅಂದಹಾಗೆ ,ರವಿ ಕಟಪಾಡಿ ವರ್ಷಂಪ್ರತಿ ವೈವಿಧ್ಯಮಯ ವೇಷಹಾಕಿ ಹಣ ಸಂಗ್ರಹಿಸಿ ಈತನಕ ಕೋಟಿ.ರೂ ಮೊತ್ತವನ್ನು ಮಕ್ಕಳ ಚಿಕಿತ್ಸೆಗಾಗಿ ವ್ಯಯಿಸಿದ್ದಾರೆ.
