ಬೆಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ನಲ್ಲಿ ಇಂದು ಕೂಡ ವಾದ ವಿವಾದ ನಡೆಯಿತು. ಶುಕ್ರವಾರ ಮುಖ್ಯನ್ಯಾಯಾಮೂರ್ತಿಗಳನ್ನು ಒಳಗೊಂಡ ತ್ರಿಸದ್ಯಸ ಪೀಠ ಮೌಖಿಕ ಆದೇಶವನ್ನು ನೀಡಿ, ಇಂದು ಅರ್ಜಿ ವಿಚಾರಣೆಯನ್ನು ನಡೆಸುವುದಾಗಿ ಹೇಳಿದ್ದರು.
ಅದರಂತೆ ಇಂದು ಅರ್ಜಿ ಪರ ಹಾಗೂ ವಿರೋಧ ವಕೀಲರು ಮುಖ್ಯ ನ್ಯಾಯಾಮೂರ್ತಿಗಳ ಪೀಠದ ಮುಂದೆ ವಾದ ಮಂಡಿಸಿದರು. ವಾದ-ವಿವಾದವನ್ನು ಆಲಿಸಿದ ನ್ಯಾಯಾಪೀಠ,
ಇದೇ ವೇಳೇ ವಾದ ವಿವಾದವನ್ನು ಆಲಿಸಿದ ನ್ಯಾಯಾಪೀಠ ನಾಳೆ ಮಧ್ಯಾಹ್ನ 2:30ಕ್ಕೆ ಮುಂದೂಡಿದೆ.
ಘಟನೆ ಹಿನ್ನಲೆ: ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಹಾಜರಾಗುವುದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಅಂತ ಆರೋಪಿಸಿ ವಿದ್ಯಾರ್ಥಿನಿಯರಾದ ಆಯೇಷಾ ಹಜೀರಾ ಅಲ್ಮಾಸ್ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಪ್ರಾರಂಭದಲ್ಲಿ ಹೈಕೋರ್ಟ್‌ನ ಏಕಸದ್ಯಸ ಪೀಠ ನಡೆಸಿದ ಬಳಿಕ ಹೆಚ್ಚಿನ ವಿಚಾರಣೆಗಾಗಿ ಮುಖ್ಯ ನ್ಯಾಯಾಮೂರ್ತಿಗಳಿಗೆ ವಿಚಾರಣೆಯನ್ನು ವರ್ಗಾವಣೆ ಮಾಡಿದ್ದರು.
ನ್ಯಾಯಾಲಯದ ಇಂದಿನ ಕಲಾಪದಲ್ಲಿ ನಡೆದ ಕೆಲ ಪ್ರಮುಖ ಹೈಲೆಟ್ಸ್ ಪಾಯಿಂಟ್ ಇಲ್ಲಿದೆ
ನ್ಯಾಯಾಮೂರ್ತಿಗಳು: ವಿದ್ಯಾರ್ಥಿನಿಯರು ಈ ಹಿಂದೆ ಹಿಜಾಬ್ ಧರಿಸುತ್ತಿದ್ದರೇ?
ಅರ್ಜಿದಾರರ ಪರ ವಕೀಲರು: ಹೌದು, ಅವರು ಈ ಹಿಂದಿನದಲ್ಲೀ ಸಮವಸ್ತ್ರ ಬಣ್ಣದ ಹಿಜಾಬ್ ಧರಿಸುತ್ತಿದ್ದರು.
ಅರ್ಜಿದಾರರ ಪರ ವಕೀಲರು: ಕೇಂದ್ರಿಯ ವಿವಿಗಳಲ್ಲಿ ಈಗಲೂ ಕೂಡ ಹಿಜಾಬ್ ಧರಿಸಲು ಅವಕಾಶವಿದೆ.