ಬೆಂಗಳೂರು: ಅಕ್ಟೋಬರ್ 8 – 10 ರವರೆಗೆ ಬೆಳಗ್ಗೆ 10 – ಸಂಜೆ 7 ತನಕ ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಅವಕಾಶ ನೀಡಿದ್ದು, ಈ ಮೂಲಕ `BPL’ ರೇಷನ್ ಕಾರ್ಡ್‌ದಾರರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದಾಗಿದೆ ಅಂತ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಬೆಂಗಳೂರು ಒನ್, ಕರ್ನಾಟಕ ಒನ್ , ಗ್ರಾಮ ಒನ್ ಕೇಂದ್ರದಲ್ಲಿ BPL ಕಾರ್ಡ್ ಹೆಸರು ಸೇರ್ಪಡೆ, ತಿದ್ದುಪಡಿಯನ್ನು ಮಾಡಿಸಿಕೊಳ್ಳಬಹುದಾಗಿದೆ ಕೂಡ. ಅಕ್ಟೋಬರ್ 8 ರಿಂದ 10 ರವರೆಗೆ ಈ ಕೆಳಕಂಡ ಜಿಲ್ಲೆಗಳ ರೇಷನ್ ಕಾರ್ಡ್‌ದಾರರು ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
ಎಲ್ಲೆಲ್ಲಿ?
“ಬೆಳಗಾವಿ “ಬಾಗಲಕೋಟೆ
“ಚಾಮರಾಜನಗರ
*ಚಿಕ್ಕಮಗಳೂರು *ದಕ್ಷಿಣ ಕನ್ನಡ ಧಾರವಾಡ -ಗದಗ
• ಹಾಸನ
* ಹಾವೇರಿ
• ಕೊಡಗು
• ಮ೦ಡ್ಯ * ಮೈಸೂರು
• ಉಡುಪಿ
• ಉತ್ತರ ಕನ್ನಡ • ವಿಜಯಪುರ