ಉಡುಪಿ: 78 ವರ್ಷದ ವೃದ್ಧೆಯನ್ನು ಅತ್ಯಾಚಾರ ಮಾಡಿ ಹಣ ದೋಚಿದ್ದ ಆರೋಪಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 10 ವರ್ಷದ ಕಠಿಣ ಸಜೆ, ಐವತ್ತು ಸಾವಿರ ದಂಡ ವಿಧಿಸಿದ ಆದೇಶಿಸಿದೆ.
ಶಿವಮೊಗ್ಗ ಮೂಲದ ಇರ್ಫಾನ್ ಅತ್ಯಾಚಾರ ನಡೆಸಿದ ಆರೋಪಿ.ಗುಜರಿ ಮಾರಾಟ ಮಾಡಿ ಬದುಕುತ್ತಿದ್ದ ವೃದ್ದೆಯ ಮೇಲೆ ಜೂನ್ 5, 2017 ರಂದು ಉಡುಪಿ ತೆಂಕಪೇಟೆ ಪರಿಸರದ ನಿರ್ಜನ ಪರಿಸರದಲ್ಲಿ ಆರೋಪಿ ಇರ್ಫಾನ್ ಅತ್ಯಾಚಾರವೆಸಗಿದ್ದ.ಇನ್ನು ವೃದ್ಧೆಯು ಗುಜರಿ ವ್ಯಾಪಾರ ಮಾಡಿ ಸಂಗ್ರಹಿಸಿದ್ದ 30,000 ರೂ. ಅನ್ನು ಇರ್ಫಾನ್ ದರೋಡೆ ಮಾಡಿದ್ದು, ಇದೀಗ ಆತನಿಗೆ ಅತ್ಯಾಚಾರ ಪ್ರಕರಣದಲ್ಲಿ 10 ವರ್ಷದ ಕಠಿಣ ಸಜೆ, ಐವತ್ತು ಸಾವಿರ ದಂಡ ವಿಧಿಸಿದೆ.ದರೋಡೆ ಪ್ರಕರಣದಲ್ಲಿ ಆರು ತಿಂಗಳ ಸಾದಾ ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಸಂತ್ರಸ್ತ ವೃದ್ಧೆಗೆ ನೀಡಲು ನ್ಯಾಯಾಲಯ ಆದೇಶಿಸಿದೆ.