ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್​​ಗೆ ಆಕಸ್ಮಿಕ ಬೆಂಕಿ ತಗುಲಿ ಬೋಟ್​ ಭಾಗಶಃ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಬೋಟ್​ನಲ್ಲಿದ್ದ ಏಳು ಮಂದಿ ಮೀನುಗಾರರರನ್ನು ಇನ್ನೊಂದು ಬೋಟ್​​ನಲ್ಲಿದ್ದವರು ರಕ್ಷಣೆ ಮಾಡಿರುವ ಘಟನೆ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ನಡೆದಿದೆ.

ಮಲ್ಪೆ ಮೂಲದ ವರದ ವಿನಾಯಕ ಎಂಬ ಬೋಟ್ ಮೀನುಗಾರಿಕೆ ನಡೆಸುತ್ತಾ ಕಾರವಾರ ಸಮೀಪ ಬಂದಾಗ ಬೋಟ್​ನ ಇಂಜಿನ್ ರೂಮ್​ನಲ್ಲಾದ ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಹೆಚ್ಚಾಗಿತ್ತು. ತಕ್ಷಣ ಸಮೀಪದಲ್ಲಿಯೇ ಇದ್ದ ವರದರಾಜ ಬೋಟ್ ನವರು ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.

ಬಳಿಕ ಎರಡು ಬೋಟ್​ನ ಮೀನುಗಾರರು ಬೆಂಕಿಯನ್ನು ನಂದಿಸಿದ್ದರಾದರೂ ಬೋಟ್ ಭಾಗಶಃ ಸುಟ್ಟಿದ್ದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಸದ್ಯ ಕಾರವಾರದ ಬೈತಖೋಲ್ ಬಂದರಿಗೆ ಬೋಟ್ ಅನ್ನು ಎಳೆದು ತರಲಾಗಿದೆ.

LEAVE A REPLY

Please enter your comment!
Please enter your name here