ಉಡುಪಿ: ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯ ಸ್ವತ್ತುಗಳು ಸುಟ್ಟು ಕರಕಲಾದ ಘಟನೆ ಉಡುಪಿಯ ಕುಕ್ಕೀಕಟ್ಟೆ ಮಂಚಿ ಮೂಲಸ್ಥಾನ ಸಮೀಪ ನಡೆದಿದೆ.
ಕುಕ್ಕಿಕಟ್ಟೆ ಮಂಚಿ ಮೂಲಸ್ಥಾನ ಸಮೀಪ ಒಂಟಿಯಾಗಿ ವಾಸವಾಗಿದ್ದ ಪದ್ಮಾವತಿ ಭಟ್ ಎಂಬವರ ಮನೆಯಲ್ಲಿ ಮದ್ಯಾಹ್ನ ಈ ಅವಘಡ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಘಟನೆಯಿಂದ ಮನೆಯಲ್ಲಿದ್ದ ಬಟ್ಟೆ ಬರೆಗಳು, ಪೀಠೋಪಕರಣಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ. ಉಡುಪಿ ನಗರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
