ತುಳುನಾಡ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕ ಸಭೆಯು ದಿನಾಂಕ 11-11-2023 ರಂದು ಶನಿವಾರ ಉಡುಪಿ ಜಿಲ್ಲಾ ಕಚೇರಿಯಲ್ಲಿ ಉಡುಪಿ ತಾಲೂಕು ಘಟಕದ ಅಧ್ಯಕ್ಷರಾದ ಕೃಷ್ಣಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜಪ್ಪುರವರು ಉದ್ಘಾಟನಾ ಬಾಷಣ ಮಾಡುತ್ತ ವಿದ್ಯಾರ್ಥಿಗಳು ಹೆತ್ತವರು ಮತ್ತು ಶಿಕ್ಷಣದೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಆಸ್ತಿ ಯಾಗಬೇಕು ಎಂದರು. ಉಡುಪಿ ಜಿಲ್ಲೆ ವೀಕ್ಷಕರಾದ ಫ್ರ್ಯಾಂಕಿ ಡಿಸೋಜ ಮತ್ತು ಉಡುಪಿ ತಾಲೂಕು ಘಟಕದ ಶಿಫಾರಸು ಮೇರೆಗೆ ಕೇಂದ್ರೀಯ ಮಂಡಳಿ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರು ಅಭಿಷೇಕ್ ರವರನ್ನು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿ ಆಯ್ಕೆ ಮಾಡಿದರು.
ಉಪಾಧ್ಯಕ್ಷರಾದ ಜಯರಾಮ ಪೂಜಾರಿ, ಉಡುಪಿ ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ರೋಷನ್ ಡಿಸೋಜಾ, ಉಡುಪಿ ತಾಲೂಕು ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ತುರವೇ ಮುಖಂಡರುಗಳಾದ ಯಶು ಪಕಳ, ಅನಿಲ್ ಪೂಜಾರಿ ಸುನಂದ, ಗುಣವತಿ , ಗುಲಾಬಿ, ಹೇಮಾ,ನಿರ್ಮಲ ಮೆಂಡನ್ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಸಮರ್ಥ್, ಸಂದೇಶ್ ,ಗೌರವ್, ಸಿಂಚನ್, ಅಧಿತ್ ,ಮೋಹಿತ್, ಧನೇಶ್ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ತುಳುನಾಡ ರಕ್ಷಣಾ ವೇದಿಕೆ ಸೇರ್ಪಡೆಗೊಂಡರು.