Friday, April 19, 2024
spot_img
More

    Latest Posts

    ಕಡಬ: ಎಟಿಎಂ ಕೇಂದ್ರದಲ್ಲಿ ಬಾಕಿಯಾಗಿದ್ದ ಮಹಿಳೆಯೊಬ್ಬರ ಮೊಬೈಲನ್ನು ಹೆಲ್ಮೆಟ್ ಧರಿಸಿ ಎಗರಿಸಿದ ಭೂಪ..!

    ಕಡಬ: ಇಲ್ಲಿನ ಮುಖ್ಯ ಪೇಟೆಯ ಎಟಿಎಂ ಕೇಂದ್ರದಲ್ಲಿ ಬಾಕಿಯಾಗಿದ್ದ ಮಹಿಳೆಯೊಬ್ಬರ ಮೊಬೈಲನ್ನು ಹೆಲ್ಮೆಟ್ ಧರಿಸಿದ ಯುವಕನೊಬ್ಬ ಎಗರಿಸಿದ ಘಟನೆ ನಡೆದಿದೆ.

    ಕಡಬದ ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ನ ಎಟಿಎಂ ಕೇಂದ್ರಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ರೇಖಾ ಎಂಬವರು ಹಣ ಪಡೆಯಲು ಬಂದಿದ್ದರು.ಈ ಸಂದರ್ಭದಲ್ಲಿ ಹಣ ಬಾರದ ಹಿನ್ನೆಲೆಯಲ್ಲಿ ಮೊಬೈಲ್ ಅಲ್ಲೆ ಬಿಟ್ಟು ಪಕ್ಕದಲ್ಲಿ ಇದ್ದ ಬ್ಯಾಂಕ್ ಸಿಬ್ಬಂದಿಯನ್ನು ಕರೆಯಲು ಬ್ಯಾಂಕಿಗೆ ಹೋಗಿದ್ದರು. ಆದರೆ ವಾಪಾಸು ಬಂದು ನೋಡಿದಾಗ ಮೊಬೈಲ್ ಇಲ್ಲದಿರುವುದು ಗಮನಕ್ಕೆ ಬಂದಿದೆ.

    ಈ ಘಟನೆಯ ದೃಶ್ಯಗಳು ಎಟಿಎಂ ನಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಕೂಟಿಯಲ್ಲಿ ಬಂದ ಯುವಕ ಹೆಲ್ಮೆಟ್ ಧರಿಸಿಯೇ ಎಟಿಎಂ ಪ್ರವೇಶಿಸಿ ಹಣ ಪಡೆದಿದ್ದಾನೆ. ಜೊತೆಗೆ ಪಕ್ಕದ ಟೇಬಲ್ ನಲ್ಲಿ ಇರಿಸಿದ್ದ ಮೊಬೈಲನ್ನು ಎಗಸಿರಿದ್ದಾನೆ. ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮೊಬೈಲ್ ಕಳೆದು ಹೋಗಿರುವ ಬಗ್ಗೆ ಕಡಬ ಠಾಣೆಯಲ್ಲಿ ದೂರು ನೀಡಲಾಗಿದ್ದು, ಹೆಲ್ಮೆಟ್ ಧರಿಸಿದ ಯುವಕನ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss