Friday, March 29, 2024
spot_img
More

    Latest Posts

    ಕಲಬುರ್ಗಿ: ಪೊಲೀಸ್ ಠಾಣೆ ಎದುರೇ ಪ್ರಿಯಕರನಿಗೆ ಪ್ರೇಯಸಿಯಿಂದ ಬಿತ್ತು ಗೂಸಾ!

    ಕಲಬುರಗಿ: ಪ್ರಿಯಕರನಿಗೆ ಪ್ರೇಯಸಿ ಗೂಸಾ ಕೊಟ್ಟ ಘಟನೆ ಕಲಬುರಗಿ ಗ್ರಾಮಾಂತರ ಠಾಣೆ ಮುಂದೆ ನಡೆದಿದೆ. ಬೆಂಗಳೂರಿನಿಂದ ಪ್ರಿಯಕರನನ್ನ ಹುಡುಕಿಕೊಂಡು ಬಂದು ಪ್ರೇಯಸಿ ಗೂಸಾ ನೀಡಿದ್ದಾಳೆ. ಇರ್ಫಾನ್ಗೆ ಪ್ರೇಯಸಿ ಗೂಸಾ ನೀಡಿದ್ದಾಳೆ.

    ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. 5 ವರ್ಷಗಳಿಂದ ಇರ್ಫಾನ್ ಮತ್ತು ರಹೀನಾ ಬಾನು ಪ್ರೀತಿಸುತ್ತಿದ್ದರು. ಆದರೆ ಯುವತಿಗೆ ಅಕ್ರಮ ಸಂಬಂಧ ಇದೆ ಅಂತ ಇರ್ಫಾನ್, ರಹೀನಾ ಬಾನು ಅನ್ನು ಬೆಂಗಳೂರಿನಲ್ಲೆ ಬಿಟ್ಟು ಊರಿಗೆ ಬಂದಿದ್ದ. ಇರ್ಫಾನ್ ಕಲಬುರಗಿ ತಾಲೂಕಿನ ಪಟ್ಟಣ ಗ್ರಾಮದ ನಿವಾಸಿಯಾಗಿದ್ದಾನೆ. ಇರ್ಫಾನ್​ಗಾಗಿ ಬೆಂಗಳೂರಿಂದ ಬಂದಿದ್ದ ರಹೀನಾ ಬಾನು, ಮದುವೆ ಮಾಡಿಕೊಳ್ಳುವಂತೆ ಪಟ್ಟುಹಿಡಿದಿದ್ದಳು. ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆ ಪೊಲೀಸ್ ಠಾಣೆ ಮುಂದೆಯೇ ಪ್ರಿಯಕರನಿಗೆ ಹೊಡೆದಿದ್ದಾಳೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss