Friday, July 19, 2024
spot_img
More

  Latest Posts

  ನೂತನ ಸಂಸತ್ ಭವನದ ಉದ್ಘಾಟನೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಭಾರತ – ಗಮನ ಸೆಳೆದ ಸರ್ವಧರ್ಮೀಯರ ಸಮ್ಮಿಲನ

  ನವದೆಹಲಿ : ನೂತನ ಸಂಸತ್ ಭವನ ಉದ್ಘಾಟನಾ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ನಾಮಫಲಕವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಸರ್ವಧರ್ಮೀಯರ ಸಮ್ಮಿಲನವು ವಿಶೇಷವಾಗಿ ಗಮನ ಸೆಳೆಯಿತು. ಹೌದು, ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಪೂಜಾ ಕೈಂಕರ್ಯಗಳು ಬೆಳಗ್ಗೆ 7.30 ರಿಂದ ಆರಂಭವಾಯಿತು. ಬಳಿಕ ಐತಿಹಾಸಿಕ ಸೆಂಗೋಲ್‌ನ್ನು ಪ್ರಧಾನಿ ಮೋದಿ ಲೋಕಸಭಾ ಸ್ಪೀಕರ್ ಸ್ಥಾನದ ಸಮೀಪದಲ್ಲಿ ಪ್ರತಿಷ್ಠಾಪಿಸಿ, ದೀಪ ಬೆಳಗಿದರು. ಮಂತ್ರ-ವಾದ್ಯ ಘೋಷ, ಮಂಗಳವಾದ್ಯಗಳಿಂದ ರಾಜದಂಡವನ್ನು ಪ್ರತಿಷ್ಠಾಪಿಸಲಾಯಿತು. ಈ ವೇಳೆ ಪ್ರಧಾನಿಗೆ ಲೋಕಸಬಾ ಸ್ಪೀಕರ್ ಓಂ ಬಿರ್ಲಾ ಸಾಥ್ ನೀಡಿದರು. ಪೂಜಾ-ವಿಧಿವಿಧಾನಗಳು ನಡೆದವು. ವಿವಿಧ ಧರ್ಮದ ಮುಖಂಡರು ಪ್ರಾರ್ಥನೆ ಸಲ್ಲಿಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರಿದರು. ಪ್ರಾರ್ಥನಾ ಸಭೆಯಲ್ಲಿ ಪಂಡಿತರು, ಸಾಧು-ಸಂತರು ಭಾಗಿಯಾಗಿದ್ದು, 12 ಮಂದಿ ಧಾರ್ಮಿಕ ನಾಯಕರಿಂದ ಪ್ರಾರ್ಥನೆ ನಡೆಯಿತು. ಈ ಮಧ್ಯೆ ಕಾರ್ಮಿಕರಿಗೆ ಶಾಲು ಹೊದಿಸಿ ಪ್ರಧಾನಿ ಸನ್ಮಾನಿಸಿದರು. ಕಾರ್ಯಕ್ರಮಕ್ಕೆ ಸುಮಾರು 60 ಧಾರ್ಮಿಕ ಮುಖ್ಯಸ್ಥರನ್ನು ಕರೆಸಲಾಗಿದ್ದು, ಅವರಲ್ಲಿ ಹಲವರು ತಮಿಳುನಾಡಿನವರಾಗಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಋತ್ವಿಜರಾದ ಟಿ.ವಿ. ಸೀತಾರಾಮ ಶರ್ಮ, ಶ್ರೀರಾಮ ಶರ್ಮ, ಲಕ್ಷ್ಮೀಶ ತಂತ್ರಿ ಹಾಗೂ ದೆಹಲಿ ಶಾಖಾ ಮಠದ ನಾಗರಾಜ ಅಡಿಗ, ಋಷ್ಯಶೃಂಗ ಭಟ್ ಭಾಗಿಯಾಗಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss