ಉಡುಪಿ: ತುಳುನಾಡ ರಕ್ಷಣಾ ವೇದಿಕೆ ಉಡುಪಿ ತಾಲೂಕು ಘಟಕ ವತಿಯಿಂದ ಕ್ರಿಸ್ಮಸ್ ಸೌಹಾರ್ದ ಕೂಟ ಉಡುಪಿ ಜಿಲ್ಲಾ ಕಛೇರಿಯಲ್ಲಿ ನಡೆಯಿತು.
ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ಕೇಕ್ ಕಟ್ ಮಾಡಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಉಡುಪಿ ತಾಲೂಕು ಘಟಕ ಅಧ್ಯಕ್ಷರಾದ ಕೃಷ್ಣಕುಮಾರ್ ವಹಿಸಿ ಯೇಸುಕ್ರಿಸ್ತರ ಜೀವನ ಚರಿತ್ರೆ ತಿಳಿಸಿದರು. ಜಿಲ್ಲಾ ವೀಕ್ಷಕರಾದ ಪ್ರ್ಯಾಂಕಿ ಡಿಸೋಜ, ಸಲಹೆಗಾರರಾದ ಸುಧಾಕರ ಅಮೀನ್, ತಾಲೂಕು ಉಪಾಧ್ಯಕ್ಷ ಜಯರಾಮ ಪೂಜಾರಿ, ಯೇಶು ಕ್ರೈಸ್ತರು ಭೋದಸಿದ ಶಾಂತಿ , ಪ್ರೀತಿ, ಕ್ಷಮೆಯ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ಶುಭಾಶಯ ಪತ್ರವನ್ನು ಸಭೆಯಲ್ಲಿ ಓದಲಾಯಿತು. ಈ ಸಂದರ್ಭದಲ್ಲಿ ಉಮೇಶ್ ಶೆಟ್ಟಿ ಹಾವಂಜೆ ಯವರನ್ನು ಕೃಷ್ಣ ಕುಮಾರ್ ರವರು ಸಂಘಟನೆಯ ಶಾಲು ಹಾಕಿ ತಾಲೂಕು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿದರು. ಕೋಶಾದಿಕಾರಿ ಸುನಂದಾ, ಮಹಿಳಾ ಗೌರವ ಅದ್ಯಕ್ಷ ಗುಣವತಿ , ಸಂಸ್ಕೃತಿಕ ಕಾರ್ಯದರ್ಶಿ ವಿಜಯಲಕ್ಷ್ಮಿ, ಜೊತೆ ಕಾರ್ಯದರ್ಶಿ ಶಾಂಭವಿ , ಸಾದನ, ಸುಕನ್ಯಾ , ಹರಿ ಪ್ರಸಾದ್ , ಹೇಮಾ ಮಾಲಿನಿ ಮತ್ತಿತರರು ಉಪಸ್ಥಿತರಿದ್ದರು.