ಮಂಗಳೂರು: ನಗರದ ಮೀನಕಳಿಯದಲ್ಲಿ ನಡೆದಿರುವ ರೌಡಿಶೀಟರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ಸಹಕರಿಸಿರುವ 9ಮಂದಿ ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಸುರತ್ಕಲ್ ಇಡ್ಯಾ ನಿವಾಸಿ ಚೊಟ್ಟೆ ಸಂದೀಪ್(45), ಕೃಷ್ಣಾಪುರ ನಿವಾಸಿ ಸಂದೀಪ್ ದೇವಾಡಿಗ(32), ತಡಂಬೈಲ್ ನಿವಾಸಿ ಲಿಖಿತ್(31), ತೋಟ ಬೇಂಗ್ರೆ ನಿವಾಸಿ ಕಕ್ಕೆ ದೀಕ್ಷಿತ್(23), ಮೀನಕಳಿಯ ನಿವಾಸಿ ತುಷಾರ್ ಅಮೀನ್(30), ಕೂಳೂರು , ಪಂಜಿಮೊಗರು ನಿವಾಸಿ ವಿನೋದ್ ಕುಮಾರ್ (32), ಬಜ್ಪೆ ನಿವಾಸಿ ಲತೇಶ್ ಜೋಗಿ(27), ಬೈಕಂಪಾಡಿ ನಿವಾಸಿ ಸಂದೀಪ್ ಪುತ್ರನ್(36), ಕಾವೂರು ಮೂಡುಶೆಡ್ಡೆ ನಿವಾಸಿ ಅಕ್ಷಿತಾ(28) ಬಂಧಿತ ಆರೋಪಿಗಳು.
ಹಳೆಯ ವೈಷಮ್ಯದಿಂದ ಸ್ನೇಹಿತರೇ ರಾಜಾ ಅಲಿಯಾಸ್ ರಾಘವೇಂದ್ರ ಎಂಬ ರೌಡಿಶೀಟರ್ ನನ್ನು ಜೂ.6ರಂದು ಹತ್ಯೆ ಮಾಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಗಳಿಗೆ ಕೊಲೆಕೃತ್ಯಕ್ಕೆ ಸಹಕರಿಸಿರುವ, ಹಣಕಾಸು ನೆರವು ನೀಡಿರುವ, ತಪ್ಪಿಸಿಕೊಳ್ಳಲು ಆಶ್ರಯ ನೀಡಿರುವ ಆರೋಪದ ಮೇಲೆ ಈ 9ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
