ಮಂಗಳೂರು: ದ.ಕ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ವಿಜೇತ ಅಶೋಕನಗರ ಯುವಕ ಸಂಘ (ರಿ) ಅಶೋಕನಗರ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವೈದ್ಯಕೀಯ ನೆರವು ಹಾಗೂ ಶಾಲಾ ಮಕ್ಕಳಿಗೆ ಸಮವಸ್ತ್ರ, ಹಿರಿಯ ನಾಗರಿಕರಿಗೆ ಸೀರೆ-ದೋತಿ ಮತ್ತು ಗಾಲಿಕುರ್ಚಿ ವಿತರಣಾ ಸಮಾರಂಭ ಆಗಸ್ಟ್-15ರಂದು ಅಶೋಕನಗರ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಬೆಳಗ್ಗೆ 10.ಗಂಟೆಗೆ ನಡೆಯಲಿದೆ.

