Friday, April 19, 2024
spot_img
More

    Latest Posts

    ವಿಧಾನ ಪರಿಷತ್ ಗೆ 7 ಸದಸ್ಯರು ಅವಿರೋಧ ಆಯ್ಕೆ

    ಬೆಂಗಳೂರು: ವಿಧಾನ ಪರಿಷತ್ ಗೆ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೆಚ್ಚುವರಿ ನಾಮಪತ್ರ ಬಾರದ ಹಿನ್ನೆಲೆಯಲ್ಲಿ 7 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

    ಪರಿಷತ್ ನ 7 ಸ್ಥಾನಗಳಿಗೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ನಾಲ್ಕು, ಕಾಂಗ್ರೆಸ್ ನ ಎರಡು ಹಾಗೂ ಜೆಡಿಎಸ್ ನ ಓರ್ವ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದರು.

    ಇಂದು ನಾಮಪತ್ರ ವಾಪಸ್ ಗೆ ಕೊನೆ ದಿನವಾಗಿತ್ತು. ಆದರೆ 7ಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ 7 ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗಿದೆ.

    ಪರಿಷತ್ ನ ನೂತನ ಸದಸ್ಯರಾಗಿ ಬಿಜೆಪಿಯ ಲಕ್ಷ್ಮಣ ಸವದಿ, ಛಲವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್, ಹೇಮಲತಾ ನಾಯಕ್, ಕಾಂಗ್ರೆಸ್ ನ ಅಬ್ದುಲ್ ಜಬ್ಬಾರ್, ನಾಗರಾಜ್ ಯಾದವ್ ಹಾಗೂ ಜೆಡಿಎಸ್ ನ ಟಿ.ಎ.ಶರವಣ ಅವಿರೋಧ ಆಯ್ಕೆಯಾಗಿದ್ದು, ಕಾರ್ಯದಶಿ ವಿಶಾಲಾಕ್ಷಿ ಪ್ರಮಾಣಪತ್ರ ವಿತರಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss