Monday, November 28, 2022

ಸಮಾಜದ ಎಲ್ಲಾ ವರ್ಗದ ಜನರಿಗೆ ನೆರವು : ಐಕಳ ಹರೀಶ್ ಶೆಟ್ಟಿ

ಮಂಗಳೂರು: ಬಂಟ ಸಮಾಜದ ಸಂಘಟನೆಯ ಮೂಲಕ ಇತರ ಸಮಾಜದ ವರ್ಗಕ್ಕೂ ಮುಕ್ತ ನೆರವು ನೀಡುವ ಮೂಲಕ ಸಮಾಜದಲ್ಲಿ ಮೇಲ್ಪಂಕ್ತಿಗೆ ಕಾರಣವಾಗಿರುವ ಒಕ್ಕೂಟಕ್ಕೆ ಸಮಾಜ ಬಾಂಧವರಿಂದ ನೀಡುತ್ತಿರುವ ಸ್ಪಂದನೆಯೇ ಮೂಲ ಕಾರಣವಾಗಿದೆ....
More

  Latest Posts

  ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

  ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

  ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

  ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

  ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

  ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

  ಕುಕ್ಕೆ ಸುಬ್ರಹ್ಮಣ್ಯದಲ್ಲಿ 2 ವರ್ಷಗಳ ಬಳಿಕ ನಡೆದ ಎಡೆಮಡೆಸ್ನಾನ ಸೇವೆ

  ಇತಿಹಾಸ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಆಚರಣೆ ನಡೆಯುತ್ತಿದ್ದು ಇದರ ಅಂಗವಾಗಿ ನಡೆಯುವ ಎಡೆಮಡೆಸ್ನಾನ ಬರೋಬ್ಬರಿ ಎರಡು ವರ್ಷಗಳ ಬಳಿಕ ಇಂದು ನಡೆದಿದೆ.

  5G ನಿರೀಕ್ಷಿತರೇ, ಬಿಡುಗಡೆ ಬೆನ್ನೆಲ್ಲೇ ವಂಚಕರ ಆಟ ಆರಂಭ ; ‘5G ಸೇವೆ’ ಕುರಿತು ಈ ‘ಮೆಸೇಜ್’ ಬಂದ್ರೆ ಎಚ್ಚರ ವಹಿಸಿ

  ನವದೆಹಲಿ : ದೇಶಾದ್ಯಂತ ಮುಂಬೈ, ದೆಹಲಿಯಂತಹ ಪ್ರಮುಖ ನಗರಗಳಲ್ಲಿ 5G ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಹೊಸ ಸೇವೆಯನ್ನ ಪಡೆಯಲು ಎಲ್ಲರೂ ಉತ್ಸುಕರಾಗಿದ್ದಾರೆ. ಆದರೆ ನೀವು 5G ಸೇವೆಯನ್ನ ಪಡೆಯಲು ಆಪೇಕ್ಷಿಸಿದ್ರೆ ನಿಮಗಾಗಿ ಒಂದು ಪ್ರಮುಖ ಸುದ್ದಿ ಇದೆ.

  ಯಾಕೆಂದರೆ, 5ಜಿಯ ಆಮಿಷ ತೋರಿಸಿ ಗ್ಯಾಂಗ್ ಆಯಕ್ಟಿವ್ ಆಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ಮೊಬೈಲ್‌ನಲ್ಲಿ ಆ ವ್ಯವಸ್ಥೆಯನ್ನ ನವೀಕರಿಸಲು ಉತ್ಸುಕರಾಗಿರುತ್ತಾರೆ. ಇದನ್ನು ಮನಗಂಡ ಕೆಲ ಸೈಬರ್ ಹ್ಯಾಕರ್’ಗಳು ಕೂಡ ಹೊಸ ರೀತಿಯ ವಂಚನೆಗೆ ಮುಂದಾಗಿದ್ದಾರೆ. ಈ ಹೊಸ ರೂಪದ ಸೈಬರ್ ಕ್ರೈಮ್‌ಗೆ ಬಲಿಯಾಗಬೇಡಿ ಎಂದು ತಜ್ಞರು ಎಚ್ಚರಿಸಿದ್ದಾರೆ.

  ನಿಮ್ಮ ಮೊಬೈಲ್‌ನಲ್ಲಿರುವ 4G ಸಿಸ್ಟಮ್’ನ್ನ 5Gಗೆ ಅಪ್‌ಗ್ರೇಡ್ ಮಾಡಬೇಕೆಂದು ನಿಮ್ಮ ಮೊಬೈಲ್‌ನಲ್ಲಿ ಸಂದೇಶ ಅಥವಾ ಕರೆಯನ್ನ ನೀವು ಪಡೆಯಬಹುದು. ವಂಚಕರು ಅದಕ್ಕಾಗಿ ಕೊಟ್ಟಿರುವ ಲಿಂಕ್ ಮತ್ತು ಮುಂದಿನ ಪ್ರಕ್ರಿಯೆಯನ್ನ ಪೂರ್ಣಗೊಳಿಸಿ. ನಂತ್ರ ಒದಗಿಸಿದ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಿ ಎನ್ನುತ್ತಾರೆ. ನೀವು ಕೂಡ ಅದನ್ನ ಅನುಮಾನಿಸದೇ ಪ್ರಕ್ರಿಯೆ ಪ್ರಾರಂಭಿಸುತ್ತೀರಿ. ಆದ್ರೆ, ಕೊನೆಯಲ್ಲಿ ನಿಮಗದು ವಂಚನೆ ಅನ್ನೋದು ಅರಿವಿಗೆ ಬರುತ್ತೆ.

  ಹೌದು, ಅವರು ನೀಡಿರುವ ಲಿಂಕ್ ಮೇಲೆ ದರೆ ಆ ಲಿಂಕ್’ನಿಂದ ನಿಮ್ಮ ಮೊಬೈಲ್’ಗೆ ಹ್ಯಾಕಿಂಗ್ ವೈರಸ್ ಸೇರಿಕೊಂಡು ನಿಮ್ಮ ಫೋನ್ ಹ್ಯಾಕ್ ಆಗುತ್ತದೆ. ತದನಂತರ ನಿಮ್ಮ ಮೊಬೈಲ್‌ನಿಂದ ಎಲ್ಲಾ ಡೇಟಾವನ್ನ (ಫೋಟೋಗಳು / ಚಾಟಿಂಗ್ / ಬ್ಯಾಂಕಿಂಗ್ ವಿವರಗಳು) ಕದಿಯಲಾಗುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ಹಣವನ್ನ ಆರ್ಥಿಕ ಅಥವಾ ಭಾವನಾತ್ಮಕ ಬ್ಲ್ಯಾಕ್‌ಮೇಲ್ ಮೂಲಕ ಸುಲಿಗೆ ಮಾಡಲಾಗುತ್ತದೆ. ಅಥವಾ ನೀವು ಅವರ ಪ್ರಕ್ರಿಯೆಯಲ್ಲಿ ಆ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಈಗ ನೀವು OTP ಅನ್ನು ಪಡೆಯುತ್ತೀರಿ ಅದು ನಮಗೆ ತಿಳಿಸಿ ಎಂದು ಕೇಳುತ್ತಾರೆ. ನೀವು ಅದನ್ನು ಅವರಿಗೆ ನೀಡುತ್ತೀರಿ ಮತ್ತು ಮುಂದಿನ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆ ಖಾಲಿಯಾಗುತ್ತೆ. ಯಾಕಂದ್ರೆ, ನಿಮ್ಮ ಫೋನ್ ನಿಮ್ಮ ಬ್ಯಾಂಕ್ ಖಾತೆಗೂ ಲಿಂಕ್ ಆಗಿರುತ್ತೆ. ಆದ್ದರಿಂದ ದಯವಿಟ್ಟು ಅಂತಹ ಯಾವುದೇ ಕರೆಗಳು / ಸಂದೇಶಗಳಿಗೆ ಉತ್ತರಿಸಬೇಡಿ.

  ಮುನ್ನೆಚ್ಚರಿಕೆ ಕ್ರಮ..!
  ಈ ಕಾಟ ತಪ್ಪಿಸಲು ಸರಳ ಪರಿಹಾರವಿದೆ. ನಿಮ್ಮ ಸಂಖ್ಯೆ (SIM ಕಾರ್ಡ್) ಸೇರಿರುವ ಕಂಪನಿ. ಆ ಸೇವಾ ಪೂರೈಕೆದಾರ ಕಂಪನಿಯ ನಿಮ್ಮ ಹತ್ತಿರದ ಶೋರೂಂಗೆ ನೀವೇ ಭೇಟಿ ನೀಡಿ. ಮತ್ತು ಅವರಿಂದ ನಿಮ್ಮ ಸಿಮ್ ಅನ್ನು ಅಪ್‌ಗ್ರೇಡ್ ಮಾಡಿ. ಇದು ಅತ್ಯಂತ ಸುರಕ್ಷಿತವಾಗಿದೆ. ಯಾರೋ ಹೇಳಿದಂತೆ, ಆನ್‌ಲೈನ್‌ನಲ್ಲಿ ಅಪ್‌ಗ್ರೇಡ್ ಮಾಡುವುದು ಅಪಾಯಕಾರಿ. ನೀವು ಜಾಗರೂಕರಾಗಿರಿ ಆದರೆ ಅದೇ ಸಂದೇಶವನ್ನು ನಿಮ್ಮ ಕುಟುಂಬ/ಸ್ನೇಹಿತರಿಗೂ ತಿಳಿಸಿ ಎಂದು ಸೈಬರ್ ಪೊಲೀಸರು ನಾಗರಿಕರಿಗೆ ಮನವಿ ಮಾಡಿದ್ದಾರೆ.

  Latest Posts

  ಮಂಗಳೂರು: ಪತ್ನಿಯ ಕೊಲೆಗೈದ ಪತಿಯ ಬಂಧನ

  ಬಜ್ಪೆ: ಮಹಿಳೆಯೋರ್ವರನ್ನು ದೊಣ್ಣೆಯಿಂದ ಹೊಡೆದು ಕೊಲೆ‌ಮಾಡಿದ ಘಟನೆ ಬಜ್ಪೆ ಪೋಲಿಸ್‌ ಠಾಣಾ ವ್ಯಾಪ್ತಿಯ ತೆಂಕಯೆಕ್ಕಾರು ದುರ್ಗಾನಗರ ಬಳಿ‌ ನಡೆದಿದೆ. ಸರಿತಾ(35)ಕೊಲೆಯಾದ ಮಹಿಳೆ.ಕುಡುಕನಾಗಿದ್ದ ಪತಿ ದುರ್ಗೇಶ್ ಸರಿತಾಗೆ...

  ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣ: ಕರಾವಳಿ ಜನರು ಸದಾ ಜಾಗೃತರಾಗಿರಬೇಕು – ಪೇಜಾವರ ಶ್ರೀ

  ಉಡುಪಿ: ಮಂಗಳೂರು ಕುಕ್ಕರ್ ಬಾಂಬ್ ‌ಸ್ಫೋಟ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿರುವ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕರಾವಳಿ ಭಾಗದಲ್ಲಿ ಉಗ್ರ ಕೃತ್ಯಗಳು ಕುಕ್ಕರ್ ಬಾಂಬ್ ಸ್ಫೋಟದ ವೇಳೆ...

  ಉಪ್ಪಿನಂಗಡಿ: ಮಗಳನ್ನು ಮದುವೆ ಮಾಡಿ ಕೊಡಲು ನಿರಾಕರಿಸಿದ ಕಾರಣಕ್ಕೆ ತಂಡದಿಂದ ಹಲ್ಲೆ

  ಉಪ್ಪಿನಂಗಡಿ: ಮಗಳನ್ನು ತನಗೆ ಮದುವೆ ಮಾಡಿ ಕೊಡಲು ನಿರಾಕರಿಸಿದ ಎಂಬ ಕಾರಣಕ್ಕೆ ಆ ವ್ಯಕ್ತಿಯ ಮನೆಗೆ ಯುವಕನೋರ್ವ ತಂಡ ಕಟ್ಟಿಕೊಂಡು ನುಗ್ಗಿ ಮಾರಕಾಯುಧಗಳಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಆರೋಪದಲ್ಲಿ ನಾಲ್ವರನ್ನು...

  ಕುಕ್ಕೆ ಸುಬ್ರಹ್ಮಣ್ಯದಲ್ಲಿ 2 ವರ್ಷಗಳ ಬಳಿಕ ನಡೆದ ಎಡೆಮಡೆಸ್ನಾನ ಸೇವೆ

  ಇತಿಹಾಸ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಆಚರಣೆ ನಡೆಯುತ್ತಿದ್ದು ಇದರ ಅಂಗವಾಗಿ ನಡೆಯುವ ಎಡೆಮಡೆಸ್ನಾನ ಬರೋಬ್ಬರಿ ಎರಡು ವರ್ಷಗಳ ಬಳಿಕ ಇಂದು ನಡೆದಿದೆ.

  Don't Miss

  ಚಾರ್ಮಾಡಿ : ಆಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿ

  ಚಿಕ್ಕಮಗಳೂರು: ಅಂಬುಲೆನ್ಸ್ ಹಾಗೂ ಆಟೋ ಮುಖಾಮುಖಿಯಾಗಿ ಡಿಕ್ಕಿಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಚಾರ್ಮಾಡಿ...

  ಡಿ.2 ರಂದು ತುಳುವಿನಲ್ಲಿ ಕಾಂತಾರ ಬಿಡುಗಡೆ

  ಬೆಂಗಳೂರು: ಕೊನೆಗೂ ತುಳು ಭಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಗೆ ಕೊನೆಗೂ ಮುಹೂರ್ತ ಕೂಡಿ ಬಂದಿದ್ದು, ಡಿಸೆಂಬರ್ 2 ರಂದು ತುಳು ಬಾಷೆಯಲ್ಲಿ ಕಾಂತಾರ ಸಿನೆಮಾ ಬಿಡುಗಡೆಯಾಗಲಿದೆ. ಕಾಂತಾರ ಇದೀಗ ಬಿಡುಗಡೆಯಾದ...

  ಮದುವೆಗೆ ಒಪ್ಪದ ಮಗಳನ್ನೇ ಕತ್ತು ಸೀಳಿ ಕೊಂದ ತಾಯಿ!

  ಕುಟುಂಬದವರು ನೋಡಿದ ಹುಡುಗನನ್ನು ಮದುವೆ ಆಗಲು ಒಪ್ಪಲಿಲ್ಲ ಅಂತ 20 ವರ್ಷದ ಮಗಳನ್ನೇ ತಾಯಿ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

  ಉಡುಪಿ: ರೋಸ್ ಸಮಾರಂಭದಲ್ಲಿ ಯುವತಿ ಕುಸಿದು ಬಿದ್ದು ಸಾವು

  ಉಡುಪಿ: ಕ್ರಿಶ್ಚಿಯನ್ನರ ಮನೆಯಲ್ಲಿ ನಡೆಯುವ ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿಯೊಬ್ವರು ಕುಸಿದು ಬಿದ್ದು ಸಾವನ್ನಪ್ಪಿದ್ದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಮೃತ ಯುವತಿಯನ್ನು ಹಾವಂಜೆ...

  ರಿಯಲ್​ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

  ಬೆಂಗಳೂರು: ಸ್ಯಾಂಡಲ್​ವುಡ್​ ನಟ ರಿಯಲ್ ಸ್ಟಾರ್​ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು ನೆಲಮಂಗಲದಲ್ಲಿರುವ ಹರ್ಷ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಇಂದು ಏಕಾಏಕಿ ಮೂಗು ಬ್ಲಾಕ್​ ಆಗಿ, ಉಸಿರಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ ಆಸ್ಪತ್ರೆಗೆ...