ಕಲಬುರ್ಗಿ; ಮಗ ಪಿಎಸ್ಐ ಆಗಲಿ ಎಂದು ಇದ್ದ ಮನೆ ಮಾರಿ 50 ಲಕ್ಷ ಲಂಚ ಕೊಟ್ಟ ತಂದೆ ಇತ್ತ ಮನೆಯೂ ಇಲ್ಲ, ಪಿಎಸ್ ಐ ಹುದ್ದೆಯೂ ಇಲ್ಲ, ತಂದೆ ಮಗ ಜೈಲು ಪಾಲಾದ ಘಟನೆ ಕಲಬುರ್ಗಿಯಲ್ಲಿ ನಡೆದಿದೆ.
ಇದು ಶರಣಪ್ಪ ಎನ್ನುವವರ ಸ್ಥಿತಿ. ಮಗ ಪ್ರಭು ಪಿಎಸ್ಐ ಆಗಲಿ ಎಂದು ಇದ್ದ ಮನೆ ಮಾರಿ ಸಂಸಾರವನ್ನು ಬೀದಿಗೆ ಹಾಕಿ ಜೈಲು ಪಾಲಾಗಿದ್ದಾರೆ. ಶರಣಪ್ಪ ತನ್ನ ಮಗ ಪ್ರಭುವಿಗಾಗಿ, ಆಡಿಟರ್ ಚಂದ್ರಕಾಂತ್ ಕುಲಕರ್ಣಿ ಮೂಲಕ ಆರೋಪಿ ಆರ್.ಡಿ. ಪಾಟೀಲ್ ಗೆ ಮನೆ ಮಾರಿ 50 ಲಕ್ಷ ಹಣ ನೀಡಿ ಬಾಡಿಗೆ ಮನೆಯಲ್ಲಿದ್ದರು. ಇದೀಗ ಅಕ್ರಮ ಬಯಲಾಗಿ ಸಿಐಡಿ ಅಧಿಕಾರಿಗಳು ಅಪ್ಪ- ಮಗನನ್ನು ಬಂಧಿಸಿದ್ದಾರೆ.

