ಮಂಜೇಶ್ವರ: ಮೀಯಪದವು ಶ್ರೀ ಅಯ್ಯಪ್ಪ ಸೇವಾ ಸಂಘ (ರಿ.) ಇದರ ವತಿಯಿಂದ 44ನೇ ವರ್ಷದ ಅಯ್ಯಪ್ಪ ದೀಪೋತ್ಸವ ಡಿ.25ರಿಂದ 26ರ ವರೆಗೆ ಮೀಯಪದವು ಶ್ರಿ ಅಯ್ಯಪ್ಪ ಭಜನಾ ಮಂದಿರದಲ್ಲಿ ನಡೆಯಲಿದೆ.
ಅದೇ ರೀತಿ ಡಿ.25 ಆದಿತ್ಯವಾರ ದಂದು ಗಣಹೋಮ,ಭಜನೆ ಸೇವೆ, ಸಾಮೂಹಿಕ ಸತ್ಯನಾರಾಯಣ ಪೂಜೆ, ಶನೀಶ್ವರ ಪೂಜೆ, ಬಳಿಕ ಮಹಾಪೂಜೆಯ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಡಿ.26 ಸೋಮವಾರ ದಂದು ಗಣಹೋಮ, ಮಹಾಪೂಜೆ, ಅನ್ನಸಂತರ್ಪಣೆ, ತಾಲಪ್ಪೋಲಿ ಎಳುನೆಳ್ಚತ್ (ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಮೆರವಣಿಗೆ) ಮತ್ತು ದೀಪಾರಾಧನೆ ತಾಯಂಬಕ ಮತ್ತು ಅಗ್ನಿಸೇವೆ, ಪೂಜೆ, ಅಗ್ನಿ ಪ್ರವೇಶ, ಪ್ರಸಾದ ವಿತರಣೆ ಮತ್ತು ಮಂಜೇಶ್ವರ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದ ʼಮಾತೆರ್ಲೆಕ ಅತ್ತ್ʼ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಗೌರವಾಧ್ಯಕ್ಷರು ಪಳ್ಳತ್ತಡ್ಕ ಪಿ. ಚಂದ್ರಶೇಖರ ಶೆಟ್ಟಿ, ಅಧ್ಯಕ್ಷರು ಶ್ರೀಧರರಾವ್ ಆರ್.ಎಂ, ಮುನ್ನಿಪ್ಪಾಡಿ ಕಾರ್ಯಧ್ಯಕ್ಷರು ದಿವಾಕರ ರೈ, ಕಾರ್ಯದರ್ಶಿ ಶ್ರೀನಿವಾಸ್ ಪಂಚಮಿ, ಬಾನಬೆಟ್ಟು ಕೋಶಾಧಿಕಾರಿ ಬಿ. ಸುಬ್ಬಣ್ಣ ಆಳ್ವ, ಗುರುಸ್ವಾಮಿ ರಂಜಿತ್ ಕುಮಾರ್ ಕೆ., ದರ್ಬೆ ನಡುಮನೆ ಅಧ್ಯಕ್ಷರು ಮೋಹನ್ ದಾಸ್ ಶೆಟ್ಟಿ, ಕಾರ್ಯದರ್ಶಿ ಗಿರೀಶ್ ಬಾನಬೆಟ್ಟು, ಮುನ್ನಿಪ್ಪಾಡಿ, ಕೋಶಾಧಿಕಾರಿ ಹಾಗೂ ಸರ್ವ ಸಮಿತಿಯ ಸದಸ್ಯರು ಸದಾನಂದ ಬೇರಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.