ಬೆಳಗಾವಿ: ಹಳ್ಳದಲ್ಲಿ ತೇಲಿ ಬಂದ ಬೃಹತ್ ಡಬ್ಬಿಯಲ್ಲಿ 7 ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂ ಕಿನಲ್ಲಿ ಬೆಳಕಿಗೆ ಬಂದಿದೆ.
ಆಗತಾನೇ ಹುಟ್ಟಿದ ನವಜಾತ ಶಿಶುಗಳ ಮೃತದೇಹಗಳನ್ನು ಡಬ್ಬಿಯಲ್ಲಿಟ್ಟು ಕಿರಾತಕರು ಹಳ್ಳಕ್ಕೆ ಬಿಸಾಕಿದ್ದಾರೆ.
ಹಳ್ಳದಲ್ಲಿ ತೇಲಿ ಬಂದ ಡಬ್ಬಿ ತೆರೆದು ನೋಡಿದ ಗ್ರಾಮಸ್ಥರು ಒಂದಲ್ಲ, ಎರಡಲ್ಲ ನಾಲ್ಕು ಶಿಶುಗಳ ಶವ ಕಂಡು ಕಂಗಾಲಾಗಿದ್ದಾರೆ.
ಸ್ಥಳಕ್ಕೆ ಮೂಡಲಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನವಜಾತ ಶಿಶುಗಳ ಶವದ ಡಬ್ಬಿ ತೇಲಿ ಬಂದಿದ್ದಾದರೂ ಎಲ್ಲಿಂದ? ಕೃತ್ಯವೆಸಗಿದ್ದು ಯಾರು? ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.
