ದಕ್ಷಿಣ ಕೊರಿಯಾ: ಏಪ್ರಿಲ್ 1 ರಂದು ದಕ್ಷಿಣ ಕೊರಿಯಾದ ವಾಯುಪಡೆಯ ಎರಡು ವಿಮಾನಗಳು ತರಬೇತಿಯ ಸಮಯದಲ್ಲಿ ಗಾಳಿಯ ಮಧ್ಯದಲ್ಲಿ ಡಿಕ್ಕಿ ಹೊಡೆದು, ನೆಲೆಯ ಬಳಿ ಪತನಗೊಂಡಿವೆ. ವಿಮಾನದಲ್ಲಿದ್ದ ಎಲ್ಲಾ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ವಿಮಾನಗಳು ಕೆಟಿ -1 ತರಬೇತಿ ವಿಮಾನಗಳಾಗಿದ್ದು, ದಕ್ಷಿಣ ಕೊರಿಯಾದ ಮೊದಲ ಸ್ವದೇಶಿ ನಿರ್ಮಿತ ವಿಮಾನಗಳಾಗಿವೆ. ಇನ್ನೀದು ಆಗ್ನೇಯ ನಗರವಾದ ಸಚಿಯಾನ್ ನಲ್ಲಿರುವ ವಾಯುಪಡೆಯ ನೆಲೆಯಿಂದ ಹಾರಾಟ ತರಬೇತಿಗಾಗಿ ಒಂದರ ನಂತರ ಒಂದರಂತೆ ಟೇಕಾಫ್ ಆಗಿದೆ ಎಂದು ವಾಯುಪಡೆ ಹೇಳಿಕೆಯಲ್ಲಿ ತಿಳಿಸಿದೆ.