ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಅಧಿಸೂಚನೆ ಹೊರಡಿಸಿರುವಂತ ರಾಜ್ಯ ಸರ್ಕಾರವು, ಮೈನಿಂಗ್ ಮತ್ತು ಜಿಯಾಲಜಿ ಇಲಾಖೆಯ ಡೈರೆಕ್ಟರ್ ಆಗಿದ್ದಂತ ಐಎಎಸ್ ಅಧಿಕಾರಿ ಡಾ.ಬಗಾದಿ ಗೌತಮ್ ಅವರನ್ನು ಬೆಳಗಾವಿ ವಿಭಾಗದ ಪ್ರಾದೇಶಿಕ ಕಮೀಷನರ್ ಆಗಿ ಆದೇಶಿಸಲಾಗಿದೆ.

ಬೆಳಗಾವಿ ಪ್ರಾದೇಶಿಕ ಕಮೀಷನರ್ ಆಗಿದ್ದಂತ ಹಿರೇಮಠ್ ಎಂ.ಜಿ ಅವರನ್ನು ಕರ್ನಾಟಕ ರೂರಲ್ ಇನ್ಫಾಸ್ಟ್ರಕ್ಚರ್ ಡೆವಲ್ಪಮೆಂಟ್ ಕಾರ್ಪೊರೇಷನ್ ಎಂ.ಡಿಯಾಗಿ ನಿಯೋಜಿಸಲಾಗಿದೆ.
ಸ್ವರೂಪ ಟಿ.ಕೆ ಅವರನ್ನು ಸಂಜೀವಿನಿ-ಕೆಎಸ್ ಆರ್ ಎಲ್ ಪಿಎಸ್ ಹೆಚ್ಚುವರಿ ಮಿಷನ್ ಡೈರೆಕ್ಟರ್ ಅವರನ್ನು ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಓ ಆಗಿ ನೇಮಿಸಲಾಗಿದೆ.ಧಾರವಾಡ ಜಿಲ್ಲಾ ಪಂಚಾಯ್ತಿ ಸಿಇಓ ಆಗಿದ್ದಂತ ಸುರೇಶ್ ಬಿ ಹಿಟ್ನಾಲ್ ಅವರನ್ನು ದಾವಣಗೆರೆ ಜಿಲ್ಲಾ ಪಂಚಾಯ್ತಿ ಸಿಇಓ ಆಗಿ ನೇಮಕ ಮಾಡಲಾಗಿದೆ.
