Friday, March 29, 2024
spot_img
More

    Latest Posts

    ಮೃತಪಟ್ಟ ತಾಯಿಯ ಶವದ ಜೊತೆ 4 ದಿನ ಮಲಗಿದ್ದ ಮಗು

    ಆಕಸ್ಮಿಕವಾಗಿ ಮೃತಪಟ್ಟ ತಾಯಿಯ ಶವದ ಜೊತೆ 10 ವರ್ಷದ ಮಗ 4 ದಿನಗಳವರೆಗೆ ಕಾಲ ಕಳೆದಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಆಂಧ್ರಪ್ರದೇಶದ ತಿರುಪತಿಯಲ್ಲಿ ಈ ಘಟನೆ ನಡೆದಿದೆ. 10 ವರ್ಷದ ಮಗ ತನ್ನ ತಾಯಿ ವಿಶ್ರಾಂತಿ ಪಡೆಯಲು ಮಲಗಿದ್ದಾಳೆ ಎಂದು ನಂಬಿ ಸತತ 4 ದಿನಗಳಿಂದಲೂ ಶವದ ಜೊತೆ ಇದ್ದ ಎಂದು ತಿಳಿದುಬಂದಿದೆ. ಗಂಡನಿಂದ ದೂರಾಗಿದ್ದ ರಾಜಲಕ್ಷ್ಮಿ ಎಂಬಾಕೆ ತನ್ನ 10 ವರ್ಷದ ಮಗನೊಂದಿಗೆ ನೆಲೆಸಿದ್ದಳು. ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಆದರೆ ಆಕೆ ಆಕಸ್ಮಿಕವಾಗಿ ಬೆಡ್​ನಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನು ಅರಿಯದ ಪುತ್ರ ಕಳೆದ 4 ದಿನಗಳಿಂದಲೂ ಶಾಳೆಗೆ ಹೋಗಿ ಬಂದಿದ್ದಾನೆ. ತಾಯಿ ವಿಶ್ರಾಂತಿ ಪಡೆಯಲು ಮಲಗಿದ್ದಾರೆ ಎಂದು ಭಾವಿಸಿ ಸುಮ್ಮನಾಗಿದ್ದಾನೆ. ಆದರೆ 4ನೇ ದಿನ ಶವದಿಂದ ವಾಸನೆ ಬರುವಾಗ ತನ್ನ ಚಿಕ್ಕಪ್ಪನ ಬಳಿ ತೆರಳಿ ಅಮ್ಮ ಮೇಲೆ ಏಳುತ್ತಿಲ್ಲ ಎಂದಿದ್ದಾನೆ. ಇದರಿಂದ ಮನೆಗೆ ಬಂದು ನೋಡಿದಾಗ ಆಕೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಆಕೆಯ ಪುತ್ರ ಬುದ್ದಿಮಾಂಧ್ಯ ಎಂದು ಚಿಕ್ಕಪ್ಪ ತಿಳಿಸಿದ್ದು, ಆಕೆ ಮುಂದಿನ ವಾರ ಬೆಳಗಾವಿಗೆ ತೆರಳಿ ಅಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಮುಂದಾಗಿದ್ದಳು ಎಂದು ಚಿಕ್ಕಪ್ಪ ವಿವರಿಸಿದ್ದಾರೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss