ಹಾಸನ: ಜಿಲ್ಲೆಯಲ್ಲಿ ತರಬೇತಿಯಲ್ಲಿದ್ದಂತ ಸೈನಿಕರು ಇಂದು ಮಧ್ಯಾಹ್ನ ಮಾಡಿದ್ದಂತ ಬಿಸಿಯೂಟವನ್ನು ಸೇವಿಸಿ ವಾಂತಿ, ಬೇಧಿಯೊಂದಿಗೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವಂತ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದಂತ 35ಕ್ಕೂ ಹೆಚ್ಚು ಸೈನಿಕರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದರು.
ಅವರನ್ನು ಕೂಡಲೇ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಾಹನ ಚಾಲನಾ ತರಬೇತಿಗೆ ಬಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಡುಗರಹಳ್ಳಿ ಬಳಿ ಕ್ಯಾಂಪ್ ನಲ್ಲೇ ಸೈನಿಕರು ತಂಗಿದ್ದರು. ಇಂದು ಮಧ್ಯಾಹ್ನ ಕ್ಯಾಂಪ್ ನಲ್ಲೇ ಸಿದ್ಧಪಡಿಸಿದ್ದ ಆಹಾರ ಸೇವಿಸಿದಾಗ ಅಸ್ವಸ್ಥಗೊಂಡಿದ್ದರು. ಅವರಿಗೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೈನಿಕರು ಪ್ರಾಣಾಪಾಯದಿಂದ ಪಾರಾಗಿರುವುದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.