Tuesday, March 19, 2024
spot_img
More

    Latest Posts

    ರಾಜ್ಯದಲ್ಲಿ ನೀತಿ ಸಂಹಿತೆ ಜಾರಿ – ನೀತಿ ಸಂಹಿತೆಯ ಕೆಲವು ನಿರ್ಬಂಧನೆಗಳು ಏನೆಲ್ಲಾ..?

    ಬೆಂಗಳೂರು : ಕರ್ನಾಟಕದ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ತಕ್ಷಣದಿಂದಲೇ ಜಾರಿಗೆ ಬಂದಿದೆ. ಮೇ 10ರ ಬುಧವಾರ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ನೀತಿ ಸಂಹಿತೆ ಅಂದ್ರೆ ಏನು? ಈ ನೀತಿ ಸಂಹಿತೆ ಸರ್ಕಾರ, ಆಡಳಿತ ಸೇರಿದಂತೆ ಹಲವು ಕಡೆಗಳಿಗೆ ಅನ್ವಯ ಆಗಲಿದೆ. ಮುಖ್ಯಮಂತ್ರಿ ಸೇರಿದಂತೆ ಸಚಿವರು ಸರ್ಕಾರಿ ಸೌಲಭ್ಯವನ್ನು ಬಳಸುವಂತಿಲ್ಲ, ಸರ್ಕಾರಿ ವಾಹನ ಸೇರಿದಂತೆ ಇತರೆ ಸವಲತ್ತುಗಳನ್ನು ಬಳಸುವಹಾಗಿಲ್ಲ. ಸರ್ಕಾರ ಯಾವುದೇ ಯೋಜನೆಯನ್ನು ಘೋಷಣೆ ಮಾಡುವಂತಿಲ್ಲ, ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗುವಂತಿಲ್ಲ. ಆದರೆ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರಿಗೆ ಎಂದಿನಂತೆ ಭದ್ರತೆ ಇರುತ್ತದೆ, ಎಸ್ಕಾರ್ಟ್​ ಸೇರಿದಮತೆ ಎಲ್ಲಾ ರೀತಿಯ ಭದ್ರತೆ ಮುಂದುವರೆಯಲಿದೆ. ಆಡಳಿತ, ವಿರೋಧ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತವೆ. ಸರ್ಕಾರದ ಎಲ್ಲಾ ಇಲಾಖೆಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ನಿಗಮ ಮಂಡಳಿಗಳು, ಸ್ಥಳೀಯ ಪೌರ ಸಂಸ್ಥೆಗಳು, ಸರ್ಕಾರದಿಂದ ಹಣಕಾಸಿನ ನೆರವನ್ನ ಪಡೆಯುವ ಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆ ವ್ಯಾಪ್ತಿಗೆ ಬರುತ್ತವೆ. ಯಾವುದೇ ಹೊಸ ಕಾರ್ಯಕ್ರಮಗಳ ಅನುಷ್ಠಾನ ಮಾಡುವಂತಿಲ್ಲ. ನೀತಿ ಸಂಹಿತೆ ಜಾರಿಯಾದ ನಂತ್ರ ಏನೆಲ್ಲಾ ಮಾಡಬಾರದು? *ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರ ಹೊಸ ಯೋಜನೆ ಘೋಷಿಸುವಂತಿಲ್ಲ.*ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಮಾಡುವಂತಿಲ್ಲ. *ಹೊಸ ಯೋಜನೆಗೆ ಹಣ ನೀಡುವಂತಿಲ್ಲ. *ಹೊಸ ಟೆಂಡರ್ ಕರೆಯುವಂತಿಲ್ಲ. ಈಗಾಗಲೇ ಕರೆದಿದ್ದ ಟೆಂಡರ್ ಫೈನಲ್ ಕೂಡಾ ಮಾಡುವ ಹಾಗಿಲ್ಲ. *ಎಲ್ಲಕ್ಕಿಂತಾ ಮುಖ್ಯವಾಗಿ ಸಚಿವರು, ಶಾಸಕರು ಸರ್ಕಾರಿ ವಾಹನ ಬಳಸುವಂತಿಲ್ಲ ಅಧಿಕಾರಿಗಳ ಜೊತೆ ಸಭೆ ನಡೆಸುವಂತಿಲ್ಲ. ಸರ್ಕಾರಿ ವಸತಿ ಗೃಹ ಬಳಸುವಂತಿಲ್ಲ. *ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮಾತ್ರ ಧ್ವನಿವರ್ಧಕ ಬಳಕೆ ಮಾಡಬೇಕು. *ಮಂದಿರ, ಮಸೀದಿ, ಚರ್ಚ್ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳು ಚುನಾವಣಾ ಪ್ರಚಾರಕ್ಕೆ ಬಳಕೆ ಆಗಬಾರದು. ಧರ್ಮ – ಜಾತಿ ವಿಷಯಾಧಾರಿತವಾಗಿ ಮತ ಕೇಳುವಂತೆಯೇ ಇಲ್ಲ. *ಒಂದ್ಸಲ ಚುನಾವಣ ನೀತಿ ಸಂಹಿತೆ ಜಾರಿಯಾದ ಬಳಿಕ ಸರ್ಕಾರದ ಬಳಿ ಇರೋ ಹಲವಾರು ಅಧಿಕಾರಗಳು ಕಡಿತಗೊಳ್ಳುತ್ತವೆ. ಸಿಎಂಗೆ ಕೆಲವು ಅಧಿಕಾರಗಳು ಹಾಗೇ ಇರುತ್ತೆ ಮುಖ್ಯಮಂತ್ರಿಗಳಿಗೆ ಕೆಲವು ಅಧಿಕಾರಗಳು ಮುಂದುವರಿಯಲಿವೆ. ಆದರೆ ಆದೇಶ ಮಾಡುವ, ಸಹಿ ಹಾಕುವ, ಸರ್ಕಾರಿ ಕಾರ್ಯಕ್ರಮ ಕರೆಯುವ, ಭಾಗವಹಿಸುವ ಅಧಿಕಾರ ಇರಲ್ಲ. ಸಿಎಂ ಸರ್ಕಾರಿ ಕಾರನ್ನು ತಮ್ಮ ಕಚೇರಿ, ವಿಧಾನಸೌಧಕ್ಕೆ ಬಳಸಬೇಕು. ಜಿಲ್ಲಾ ಪ್ರವಾಸ, ಪ್ರಚಾರ ಗಳಿಗೆ ಸರ್ಕಾರಿ ವಾಹನ ಬಳಕೆ ನಿರ್ಬಂಧ ಇರಲಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss