Sunday, July 21, 2024
spot_img
More

    Latest Posts

    ಮಂಗಳೂರು: ಪ್ರಶಸ್ತಿಯಲ್ಲಿ ಸಿಗುವ 20 ಲಕ್ಷ ರೂ. ಮೊತ್ತವನ್ನು ಆಸ್ಪತ್ರೆಯ ಅಭಿವೃದ್ಧಿಗೆ ಬಳಸಲಾಗುವುದು- ಡಾ. ದುರ್ಗಾಪ್ರಸಾದ್ ಎಂ.ಅರ್.

    ಮಂಗಳೂರು: 2022-2023 ರ ಸಾಲಿನ ರಾಜ್ಯ ಮಟ್ಟದ ಕಾಯಕಲ್ಪ ಪ್ರಶಸ್ತಿಗೆ ಮಂಗಳೂರಿನ ಲೇಡಿಗೋಷನ್ ಸರ್ಕಾರಿ ಆಸ್ಪತ್ರೆ ಅರ್ಹತೆ ಪಡೆದು ದ್ವಿತೀಯ ಪ್ರಶಸ್ತಿ ಗಳಿಸಿದೆ. ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರಾದ ಡಾ. ದುರ್ಗಾಪ್ರಸಾದ್ ಎಂ.ಅರ್. ಪ್ರತಿಕ್ರಿಯಿಸಿ ಆಸ್ಪತ್ರೆಯ ಎಲ್ಲರ ಪ್ರಾಮಾಣಿಕ ಸೇವೆಗೆ ಸಂದ ಗೌರವ ಇದಾಗಿದೆ. ಪ್ರಶಸ್ತಿಯಲ್ಲಿ ಸಿಗುವ 20 ಲಕ್ಷ ರೂ. ಮೊತ್ತವನ್ನು ಆಸ್ಪತ್ರೆಯ ಅಭಿವೃದ್ಧಿಗೆ ಬಳಸಲಾಗುವುದು ಎಂದಿದ್ದಾರೆ. ಇಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಇವರ ಹೃದಯವಂತಿಕೆ ಎಷ್ಟಿದೆ ಎಂಬುದನ್ನು ಅರಿಯಬಹುದು. ಆವರ ಬಗ್ಗೆ ಹೇಳುವುದು ಬಹಳಷ್ಟು ಇದೆ. ಮಂಗಳೂರು ತಾಲೂಕಿನ ತೆಂಕ ಎಡಪದವು ಗ್ರಾಮದ ದಿವಂಗತ ಎಂ.ರಾಮ ಮಾಸ್ಟರ್ ಹಾಗೂ ಅಪ್ಪಿ ಟೀಚರ್ ಇವರ ದ್ವಿತೀಯ ಪುತ್ರರಾಗಿರುವ ಇವರು ವೈದ್ಯಕೀಯ ಕ್ಷೇತ್ರದಲ್ಲಿ ಸುಮಾರು 27 ವರ್ಷಗಳ ಸುದೀರ್ಘ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ವೈದ್ಯ ನಾರಾಯಣ ದೇವೋಭವ ಎಂಬ ಮಾತಿಗೆ ಅನ್ವರ್ಥ ಎಂಬಂತೆ ರೋಗಿಗಳ, ಬಡವರ, ಗರ್ಭಿಣಿಯರ, ಮಹಿಳೆಯರ ಹಾಗೂ ಮಕ್ಕಳ ಪಾಲಿಗೆ ದೇವರು ಎಂದರೆ ಅತಿಶಯೋಕ್ತಿಯಲ್ಲ! ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 1 ಲಕ್ಷಕ್ಕಿಂತಲೂ ಹೆಚ್ಚು ಲೆಪ್ರಸ್ಕೋಪಿಕ್ ಶಸ್ತ್ರ ಚಿಕಿತ್ಸೆ ಮಾಡಿದ ಏಕ ಮಾತ್ರ ವೈದ್ಯರು ಎಂಬ ದಾಖಲೆ ಮಾಡಿದ್ದಾರೆ. ಬಂಟ್ವಾಳ ತಾಲೂಕಿನ ವಾಮದ ಪದವಿನ ಕಮ್ಯುನಿಟಿ ಹೆಲ್ತ್ ಸೆಂಟರ್ ನಲ್ಲಿ ಸುಮಾರು 18 ವರ್ಷಗಳ ನಿರಂತರವಾಗಿ ಗ್ರಾಮೀಣ ಪ್ರದೇಶದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿ ಜನ ಮನ್ನಣೆ ಗಳಿಸಿದ್ದಾರೆ. ಇಂದಿಗೂ ಪ್ರತಿ ಆದಿತ್ಯವಾರ ಅಲ್ಲಿನ ಜನರ ವೈದ್ಯಕೀಯ ಸಮಸ್ಯೆಗೆ ಪರಿಹಾರ ನೀಡುತ್ತಿದ್ದಾರೆ. ಆದಿತ್ಯವಾರ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗವಹಿಸದೆ , ಊಟ ತಿಂಡಿ ಲೆಕ್ಕಿಸದೆ ತನಗಾಗಿ ಬೆಳಿಗ್ಗೆ 5 ಗಂಟೆಯಿಂದ ಕಾಯುವ ಜನರ ವೈದ್ಯಕೀಯ ಸಮಸ್ಯೆ ಅಲಿಸಿ ಅದಕ್ಕೆ ಅವರು ಪರಿಹಾರ ನೀಡುತ್ತಿದ್ದಾರೆ ಎಂದರೆ ಅವರ ಕಾರ್ಯ ದಕ್ಷತೆ ಎಷ್ಟಿದೆ ಎಂದು ನಾವು ಅವಲೋಕಿಸಬಹುದು. ಇವರ ಪ್ರಾಮಾಣಿಕ ಸೇವೆಗೆ ಬಂದ ಪ್ರಶಸ್ತಿಗಳು ಆನೇಕ. ಅದರಲ್ಲಿ ಪ್ರಮುಖವಾದದ್ದು ನಾಗರೀಕ ಸೇವಾ ಪ್ರಶಸ್ತಿ, ಗಣ ರಾಜ್ಯೋತ್ಸವ ಪ್ರಶಸ್ತಿ, ಸರ್ವೋತ್ತಮ ಪ್ರಶಸ್ತಿ, ಸ್ವಸ್ತಿ ಶ್ರೀ ಪ್ರಶಸ್ತಿ, ಉತ್ತಮ ವೈದ್ಯಕೀಯ ಅಧೀಕ್ಷಕರು ಎಂದು ಮುಖ್ಯ ಮಂತ್ರಿಗಳಿಂದ ದೊರೆತ ಪ್ರಶಸ್ತಿ. ಇನ್ನು ಅನೇಕ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿ ಪ್ರಶಸ್ತಿ ನೀಡಿರುತ್ತಾರೆ, ಆನೇಕ ಮಾತೆಯರು ಮಕ್ಕಳು ಇವರನ್ನು ಗೌರವಿಸಿದ್ದಾರೆ. ಇದೆಲ್ಲಾ ಇವರ ಮಾನವೀಯತೆಗೆ ಸಾಕ್ಷಿಯಾಗಿದೆ . ಒಂದು ಕಾಲವಿತ್ತು ಲೇಡಿಗೋಷನ್ ಆಸ್ಪತ್ರೆ ಎಂದರೆ ಅದು ಬಡವರ ಆಸ್ಪತ್ರೆ,, ಅದು ಸರ್ಕಾರಿ ಆಸ್ಪತ್ರೆ ಎಂಬ ತಿರಸ್ಕಾರ ಭಾವನೆ ಜನಮನದಲ್ಲಿತ್ತು. ಈಗ ಈ ಆಸ್ಪತ್ರೆ ಬಡವರ ಆಸ್ಪತ್ರೆಯಲ್ಲ ಸಮಾಜದ ಎಲ್ಲಾ ವರ್ಗದ ಜನರು ಇಲ್ಲಿಗೆ ಹೆರಿಗೆಗಾಗಿ ಬರುತ್ತಾರೆ. ಮುಖ್ಯವಾಗಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಮನೆಯವರು ಶ್ರೀಮಂತರು ಬರುತ್ತಿದ್ದಾರೆ. ಕಾರಣ ಆಸ್ಪತ್ರೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಖಾಸಗಿ ಆಸ್ಪತ್ರೆಗಳಿಗಿಂತ ಉತ್ತಮ ಸೇವೆಯೊಂದಿಗೆ, ಶುಚಿತ್ವ, ವೈದ್ಯರು ,ದಾದಿಗಳು , ಸಿಬ್ಬಂದಿ ವರ್ಗ, ವೈದ್ಯಕೀಯ ಉಪಕರಣಗಳು, ಅಧೀಕ್ಷಕರ ಉತ್ತಮ ಭಾಂದವ್ಯ ರೋಗಿಗಳು ಸರ್ಕಾರಿ ಆಸ್ಪತ್ರೆ ಎಂಬ ಭಾವನೆ ಇಲ್ಲದೇ ಸೇವೆ ಪಡೆಯುತ್ತಿದ್ದಾರೆ. ಆಸ್ಪತ್ರೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಅಧೀಕ್ಷಕರು ತುಂಬಾ ಶ್ರಮ ಪಡುತ್ತಿದ್ದಾರೆ. ಆನೇಕ ಸಂಘ ಸಂಸ್ಥೆಗಳು ಇವರ ಕನಸುಗಳಿಗೆ ಕೈ ಜೋಡಿಸುತ್ತಿದ್ದಾರೆ. ಆಸ್ಪತ್ರೆಗೆ ಹೊಸ ಕಾಯಕಲ್ಪ ಒದಗಿಸುವ ಸಂದರ್ಭದಲ್ಲಿ ರಾಜ್ಯಮಟ್ಟದ ಕಾಯಕಲ್ಪ ಪ್ರಶಸ್ತಿ ಬಂದಿರುವುದು ನಿಜಕ್ಕೂ ಅಭಿನಂದನೀಯ. ಉತ್ತಮ ನಾಯಕತ್ವ ಇದಕ್ಕೆ ಮುಖ್ಯ ಕಾರಣವೆಂದರೆ ತಪ್ಪಾಗಲಾರದು. ಡಾ. ದುರ್ಗಾಪ್ರಸಾದ್ ಎಂ.ಆರ್. ಇವರ ನೇತೃತ್ವದಲ್ಲಿ ಮಂಗಳೂರು ಲೇಡಿಗೋಷನ್ ಸರ್ಕಾರಿ ಆಸ್ಪತ್ರೆಗೆ ಇನ್ನೂ ಉನ್ನತ ಮಟ್ಟದ ಪ್ರಶಸ್ತಿಗಳು ಲಭಿಸಲಿ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss