ಶ್ರೀನಗರ: ಬೆಳಗ್ಗೆ ಪಾಳಿಯ ಕರ್ತವ್ಯಕ್ಕೆ ತೆರಳುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) 15 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ಶುಕ್ರವಾರ ಮುಂಜಾನೆ ಜಮ್ಮುವಿನಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಜಮ್ಮುವಿನ ಚಡ್ಡಾ ಕ್ಯಾಂಪ್ ಬಳಿ ಬೆಳಿಗ್ಗೆ 4.25 ರ ಸುಮಾರಿಗೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇದೇ ವೇಳೆ ಸಿಐಎಸ್‌ಎಫ್ ಭಯೋತ್ಪಾದಕ ದಾಳಿಯನ್ನು ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿತು ಮತ್ತು ಭಯೋತ್ಪಾದಕರನ್ನು ಓಡಿಹೋಗುವಂತೆ ಮಾಡಿದೆ ಎನ್ನಲಾಗಿದೆ. ಇದೇ ವೇಳೇ ಘಟನೆಯಲ್ಲಿ ಸಿಐಎಸ್‌ಎಫ್‌ನ ಒಬ್ಬ ಎಎಸ್‌ಐ ತನ್ನ ಪ್ರಾಣವನ್ನು ತ್ಯಾಗ ಮಾಡಿದ್ದು,ಇಬ್ಬರು ಗಾಯಗೊಂಡಿದ್ದಾರೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
