ಬೆಂಗಳೂರು: 14 ಗ್ರಾಮಪಂಚಾಯತಿಗಳಿಗೆ ಚುನಾವಣಾ ದಿನಾಂಕವನ್ನು ಪ್ರಕಟವಾಗಲಿದೆ, ಜು.12 ರಂದು ಕಡೆಯ ದಿನವಾಗಿದೆ. ಜು.13 ರಂದು ನಾಮಪತ್ರ ಪರಿಶೀಲಿಸಲಿದ್ದು, ಜು.15ರವರೆಗೆ ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಈ ನಡುವೆ 14 ಗ್ರಾಮ ಪಂಚಾಯಿತಿಗಳ 207 ಸದಸ್ಯ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ.
174 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 223 ಸದಸ್ಯ ಸ್ಥಾನಗಳಿಗೂ ರಾಜ್ಯ ಚುನಾವಣಾ ಆಯೋಗ ಚುನಾವಣೆ ದಿನಾಂಕ ಪ್ರಕಟಿಸಿದೆ. ಜು.6 ರಂದು ಆಯಾ ಜಿಲ್ಲಾಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ. ಅಂದೇ ನಾಮಪತ್ರವನ್ನು ಸಲ್ಲಿಸುವುದಕ್ಕೆ ಅವಕಾಶವನ್ನು ನೀಡಲಾಗಿದೆ.