ಉಡುಪಿ:ಗಾಂಜಾ ಸೇವಿಸಿದ ಆರೋಪದ ಮೇಲೆ 11 ಯುವಕರನ್ನು ಪೊಲೀಸರು ಮಣಿಪಾಲ ಆಸುಪಾಸಿನಲ್ಲಿ ಬಂಧಿಸಿದ್ದಾರೆ.
ನಿತ್ಯಮ್, ಆರ್ಯನ್, ಮೊಹಮ್ಮದ್ ಅಬ್ದುಲ್ಲಾ, ಸರ್ಫ್ರಾಜ್ ಅಹ್ಮದ್, ಕೆವಿನ್ ಪೀಟರ್, ಅಕ್ಷಯ್ ಪಿ, ಸಚಿನ್ ಎಸ್ ಪೈ, ಅಕ್ಷಯ್, ವೆಂಕಟ ಗಣೇಶ್, ದೃವ್ ಮಿಲಿಂದ್ ಮತ್ತು ಪ್ರದ್ಯುಮ್ನ ಬಂಧಿತರು.
ಮಣಿಪಾಲದ ಕೆಎಂಸಿಯಲ್ಲಿ ಬಂಧಿತ ಯುವಕರನ್ನು ಫೋರೆನ್ಸಿಕ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.ಇವರಿಗೆ ಗಾಂಜಾ ಲಭ್ಯವಾದ ಪ್ರದೇಶದ ಬಗ್ಗೆ ಮಣಿಪಾಲ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
