ಮಂಗಳೂರು: ಕಳೆದ ಕೆಲವು ದಿನಗಳಿಂದ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಮೆಸ್ಕಾಂಗೆ 11.28 ಕೋಟಿ ರೂ. ನಷ್ಟ ಸಂಭವಿಸಿದೆ. ದ.ಕ. ಜಿಲ್ಲೆಯಲ್ಲಿ 48 ಪರಿವರ್ತಕ, 2,049 ವಿದ್ಯುತ್ ಕಂಬ, 76.99 ಕಿ.ಮೀ. ವಿದ್ಯುತ್ ಮಾರ್ಗಗಳಿಗೆ ಹಾನಿ ಉಂಟಾಗಿ 335.68 ಲಕ್ಷ ರೂ. ಹಾನಿ ಎಂದು ಅಂದಾಜಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 84 ಪರಿವರ್ತಕ, 1,123 ವಿದ್ಯುತ್ ಕಂಬ, 32.77 ಕಿ.ಮೀ. ವಿದ್ಯುತ್ ಮಾರ್ಗಗಳಿಗೆ ಹಾನಿ ಉಂಟಾಗಿ 275.05 ಲಕ್ಷ ರೂ. ಹಾನಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 61 ಪರಿವರ್ತಕ, 1,773 ವಿದ್ಯುತ್ ಕಂಬ, 32.70 ಕಿ.ಮೀ. ವಿದ್ಯುತ್ ಮಾರ್ಗಗಳಿಗೆ ಹಾನಿ ಉಂಟಾಗಿ 179.9 ಲಕ್ಷ ರೂ. ಹಾನಿ ಉಂಟಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ4 ಪರಿವರ್ತಕ, 1,939 ವಿದ್ಯುತ್ ಕಂಬ, 38.78 ಕಿ.ಮೀ. ವಿದ್ಯುತ್ ಮಾರ್ಗಗಳಿಗೆ ಹಾನಿ ಉಂಟಾಗಿ 337.71 ಲಕ್ಷರೂ. ಹಾನಿಯಾಗಿದೆ. ಕಂಪೆನಿಗೆ ಒಟ್ಟು 197 ಪರಿವರ್ತಕ, 6,884 ವಿದ್ಯುತ್ ಕಂಬ, 181.24 ಕಿ.ಮೀ. ವಿದ್ಯುತ್ ಮಾರ್ಗಗಳಿಗೆ ಹಾನಿ ಉಂಟಾಗಿ 1128.37 ಲಕ್ಷರೂ. ಆಸ್ತಿಗಳಿಗೆ ಹಾನಿ ಉಂಟಾಗಿದೆ. ಇನ್ನೂ ಹಲವು ಕಡೆಗಳಲ್ಲಿ ದುರಸ್ತಿ ಕಾರ್ಯ ಮುಂದುವರಿದಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
©2021 Tulunada Surya | Developed by CuriousLabs